ಕುರುಗೋಡು: ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ಚಿತ್ರಪಟ ಮೆರವಣಿಗೆ ನಡೆಸಲಾಯಿತು. ಗಂಗಾಧರ ಸ್ವಾಮಿ ವಾಲ್ಮೀಕಿ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಗ್ರಾಮದ ಹುಚ್ಚೇಶ್ವರ ನಗರದ ಗಣೇಶ ದೇವಸ್ಥಾನ ದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಮಾವೇಶಗೊಂಡಿತು.

ಸುಮಂಗಳೆಯರು ಪೂರ್ಣಕುಂಭ, ಕಳಸ, ಮಂಗಳಮುಖಿಯರ ನೃತ್ಯ, ಹಗಲು ವೇಷಗಾರರು, ಡೊಳ್ಳು ಕುಣಿತ, ಕಂಸಾಳೆ ಕಲಾವಿದರು ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಭೀಮಲಿಂಗಪ್ಪ ಮಾತನಾಡಿ, ‘ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಹುಸೇನ್ ಪೀರ್ಸಾಬ್, ಪ್ರಮುಖರಾದ ಮುರ್ಷಿದ್ ಅಹಮದ್, ಜೆ.ಮಲ್ಲಿಕಾರ್ಜುನ, ಲಕ್ಷಣ,ವಿ ಹನುಮೇಶ್ ಮಾತನಾಡಿದರು.

ಅಧ್ಯಕ್ಷೆ ಹೊಳಗುಂದಿ ಲಕ್ಷ್ಮಿ ಕೆ.ದ್ಯಾವಣ್ಣ, ಉಪಾಧ್ಯಕ್ಷ ರಾಜಮ್ಮ ಡ್ರೈವರ್ ಹುಲುಗಪ್ಪ, ಪ್ರಮುಖರಾದ ಸಿಎಂ ನಾಗರಾಜ್ ಸ್ವಾಮಿ, ಬಿ ಸೋಮಶೇಖರಪ್ಪ, ಎಸ್.ಎಂ. ನಾಗರಾಜಸ್ವಾಮಿ, ಎಸ್.ಎಂ.ಅಡಿವೆಯ್ಯ ಸ್ವಾಮಿ, ಬಿ ನಾಗೇಂದ್ರ, ಹಾಗಲೂರು ಮಲ್ಲನಗೌಡ, ಡಿ ಚೆನ್ನಪ್ಪ, ಬಕಾಡೆ ಈರಯ್ಯ, ಬಿ.ಮಲ್ಲಯ್ಯ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.