ಬಳ್ಳಾರಿ: ‘ವೀರಶೈವರು ಲಿಂಗಾಯತರು ಬೇರೆ ಬೇರೆ ಅಲ್ಲ. ಇಬ್ಬರೂ ಒಂದೇ. ಲಿಂಗಧಾರಣೆ ಮಾಡಿ, ವಿಭೂತಿ ಧರಿಸಿ ಸಂಸ್ಕಾರ ಪಡೆದವರು ವೀರಶೈವ ಲಿಂಗಾಯತರು ಎನಿಸಿಕೊಳ್ಳುತ್ತಾರೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಪ್ರತಿಪಾದಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ಗುರುವಾರ ಜರುಗಿದ ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್ನ ಉದ್ಘಾಟನಾ ಸಮಾರಂಭ ಹಾಗೂ ಜಂಗಮರ ಜಾಗೃತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವಿನಾಕಾರಣ ಸಮುದಾಯದಲ್ಲಿ ಕಂದಕ ಸೃಷ್ಟಿಸುವ ಹುನ್ನಾರಗಳು ಕೆಲ ರಾಜಕೀಯ ಶಕ್ತಿಗಳಿಂದ ನಡೆಸಿವೆ. ವೀರಶೈವ ಲಿಂಗಾಯತರು ಹಾಗೂ ಗುರುಗಳ ಸ್ಥಾನದಲ್ಲಿ ಜಂಗಮರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವೀರಶೈವ ಲಿಂಗಾಯತರು ಹಾಗೂ ಜಂಗಮರು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಅರಿಯದಿದ್ದರೆ ಸಮುದಾಯದ ಬೆಳವಣಿಗೆ ಸಾಧ್ಯವಿಲ್ಲ’ ಎಂದರು.

ನಾನು ಜಂಗಮಳು

ನಾನು ಜಂಗಮ ಸಮುದಾಯಕ್ಕೆ ಸೇರಿದವಳು ಎಂದು ಬಹುತೇಕರಿಗೆ ಗೊತ್ತಿರಲಿಲ್ಲ. ಬಳ್ಳಾರಿಯಲ್ಲಿ ನಡೆಯುತ್ತಿರುವ ಜಂಗಮ ಪರಿಷತ್ನ ಉದ್ಘಾಟನಾ ಸಮಾರಂಭಕ್ಕೆ ಬಂದ ಬಳಿಕ ನಾನೂ ಸಹ ಜಂಗಮಳು ಎಂದು ಎಲ್ಲರಿಗೂ ಗೊತ್ತಾಯಿತು. ರಾಜಕೀಯವಾಗಿ ಬೆಳೆಯಲು ಈ ಹಿಂದೆ ಜಾತಿ, ಧರ್ಮಗಳು ಅಡ್ಡಿಯಾಗುತ್ತಿದ್ದವು. ಈಗ ಅವೇ ಅಸ್ತ್ರಗಳಾಗಿವೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ತಿಳಿಸಿದರು.

ಜಂಗಮ ಪರಿಷತ್ನ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಮಾತನಾಡಿ, ‘ವೀರಶೈವ ಜಂಗಮರು ಮೂಲ ಪರಂಪರೆ ಬಿಡಬಾರದು. ವೀರಶೈವ ಜಂಗಮರು ಬೇಡ ಜಂಗಮರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವೀರಶೈವ ಜಂಗಮರು ಸಹ ಹಿಂದುಳಿದ ವರ್ಗದ 3ಬಿಯಲ್ಲಿ ಬರುತ್ತಿದ್ದು, ಇದರ ಜೊತೆಗೆ ಆರ್ಥಿಕ ದುರ್ಬಲ ವಲಯಕ್ಕೆ (ಇಡಬ್ಲ್ಯೂಸಿ) ಸಿಕ್ಕಿರುವ ಮೀಸಲಾತಿಯನ್ನೇ ಬಳಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರಲ್ಲದೆ, ಹುಬ್ಬಳ್ಳಿಯಲ್ಲಿ ಸೆ.19ರಂದು ಜರುಗುವ ವೀರಶೈವ ಲಿಂಗಾಯತ ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ’ ಎಂದು ಕರೆ ನೀಡಿದರು.

ಮಾಜಿ ಶಾಸಕ ಚಂದ್ರಶೇಖರಯ್ಯಸ್ವಾಮಿ, ವೀವಿ ಸಂಘದ ಮಾಜಿ ಅಧ್ಯಕ್ಷ ಗುರುಸಿದ್ಧಯ್ಯಸ್ವಾಮಿ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಪಲ್ಲೇದ ಪಂಪಾಪತೆಪ್ಪ, ಸಿರುಗುಪ್ಪದ ವಕೀಲ ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು.

ಬುಧವಾರ ನಿಧನರಾದ ಸಮಾಜಸೇವಕಿ ಕೋಳೂರು ಪಾರ್ವತಮ್ಮ ಅವರಿಗೆ ಸಮಾರಂಭದಲ್ಲಿ
ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹರಗಿನಡೋಣಿ ಮಠದ ಶ್ರೀಗಳು, ವೀರಶೈವ ಸಮಾಜದ ಹಿರಿಯ ಮುಖಂಡ ಮಲ್ಲನಗೌಡ, ಸೋಮಲಿಂಗನಗೌಡ, ದರೂರು ಪುರುಷೋತ್ತಮಗೌಡ, ಜಂಗಮ ಪರಿಷತ್ನ ವಿ.ಎಸ್. ಪ್ರಭಯ್ಯಸ್ವಾಮಿ, ಎಚ್.ಕೆ. ಗೌರಿಶಂಕರ ಸ್ವಾಮಿ, ಎರಿಸ್ವಾಮಿ ಬೂದಿಹಾಳು ಮಠ, ಪ್ರಭುದೇವ ಕಪ್ಪಗಲ್ಲು, ಸಿದ್ಧರಾಮ ಕಲ್ಮಠ, ಮಠಂ ಗುರುಪ್ರಸಾದ್, ಸಿ.ಎಂ. ಗುರುಬಸವರಾಜ್, ಬಿಚ್ಚುಗಲ್ಲು ಪಂಚಾಕ್ಷರಪ್ಪ, ಕೆ.ಎಂ.ಶಿವಮೂರ್ತಿ, ಎಚ್.ಎಂ. ಕಿರಣ್ ಕುಮಾರ್, ಷಡಾಕ್ಷರಯ್ಯಸ್ವಾಮಿ, ಮೃತ್ಯುಂಜಯಸ್ವಾಮಿ ಬಂಡ್ರಾಳು, ಕೆ.ಎಂ. ಕೊಟ್ರೇಶ್ ಇದ್ದರು.

ಮುಖ್ಯಮಂತ್ರಿ ನಡೆ ಸರಿಯೇ?

‘ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಸರ್ಕಾರದ ಅನುಕೂಲಗಳ ಕಾರಣಕ್ಕೆ ತಮ್ಮ ಸಮುದಾಯಗಳನ್ನು ಬೇರೆ ಸಮುದಾಯಕ್ಕೆ ಸೇರಿಸುವ ಹುನ್ನಾರ ನಡೆಸಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೊರಟಿರುವುದು ಸರಿಯೇ? ಎಂದು ಲೀಲಾದೇವಿ ಆರ್. ಪ್ರಸಾದ್ ಪ್ರಶ್ನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.