ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ | ಎರಡು ಗರ್ಭಕೋಶ ಹೊಂದಿದ ಮಹಿಳೆ: ಶಿಶು-ತಾಯಿಯನ್ನು ರಕ್ಷಿಸಿದ ವೈದ್ಯರು

Published 23 ನವೆಂಬರ್ 2023, 16:17 IST
Last Updated 23 ನವೆಂಬರ್ 2023, 16:17 IST
ಅಕ್ಷರ ಗಾತ್ರ

ಹರಪನಹಳ್ಳಿ: 22 ವರ್ಷದ ಮಹಿಳೆಯೊಬ್ಬರು ಎರಡು ಗರ್ಭಾಶಯ (ಡಿಡೆಲ್ಫಿಸ್) ಹೊಂದಿದ್ದು, ಒಂದರಲ್ಲಿದ್ದ ಶಿಶುವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಇಲ್ಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈಧ್ಯರು ಹೊರತೆಗೆದು ರಕ್ಷಿಸಿದ್ದು, ಗರ್ಭಿಣಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಹೆರಿಗೆ ದಿನದ ಗಡುವು ಮುಕ್ತಾಯಗೊಂಡು ಗುರುವಾರ ತುರ್ತು ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಶಸ್ತ್ರಚಿಕಿತ್ಸೆ ತಜ್ಞ ಡಾ.ರಾಜೇಶ್ ಮತ್ತು ಅರವಳಿಕೆ ತಜ್ಞ ವೈದ್ಯ ಡಾ.ವಿನಯ್ ಅವರು ಗರ್ಭಿಣಿಯನ್ನು ಪರಿಶೀಲಿಸಿದಾಗ, ಅಸಹಜ ಹೊಟ್ಟೆ ಆಕಾರ ಕಂಡುಬಂದಿದೆ. ತಕ್ಷಣವೇ ಶಸ್ತ್ರ ಚಿಕಿತ್ಸೆ ಮಾಡಿ, ಗರ್ಭಾಶಯದಲ್ಲಿದ್ದ ಹೆಣ್ಣು ಮಗುವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮತ್ತೊಂದು ಗರ್ಭಕೋಶ ಆರೋಗ್ಯಕರವಾಗಿದೆ.

ಒಂದು ಗರ್ಭಕೋಶದಲ್ಲಿ ಹೆಣ್ಣು ಶಿಶು 3.8 ಕೆ.ಜಿ.ತೂಕವಿತ್ತು. ಮತ್ತೊಂದು ಗರ್ಭಕೋಶ ಆರೋಗ್ಯಕರವಾಗಿದೆ. ಮಗು ಆರೋಗ್ಯವಾಗಿದೆ. ಬಾಣಂತಿಗೆ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ.ರಾಜೇಶ್ ತಿಳಿಸಿದರು. ಇಬ್ಬರು ವೈಧ್ಯರ ಜೊತೆಗೆ ನರ್ಸ್‍ಗಳಾದ ಪ್ರೇಮಾ, ದೌಲಾಬಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ.

ಶಸ್ತ್ರಚಿಕಿತ್ಸೆ ತಜ್ಞ ಡಾ.ರಾಜೇಶ್ ಮಾತನಾಡಿ, ‘ಕೆಲವು ಮಹಿಳೆಯರು ಮುಲ್ಲೆರಿಯನ್ ಅಸಂಗತತೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಗರ್ಭಾಶಯದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರತಿ 2000ಕ್ಕೆ ಓರ್ವ ಮಹಿಳೆಯರಲ್ಲಿ ಕಂಡುಬರುತ್ತದೆ. ಇದರಿಂದ ಅಸಹಜ ಋತುಸ್ರಾವ, ಹೊಟ್ಟೆ ನೋವು ಬಾಧಿಸುತ್ತಿರುತ್ತದೆ. ಗರ್ಭಿಣಿ ಎಂದಾಕ್ಷಣ ಪ್ರತಿ ತಿಂಗಳು ವೈಧ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದನ್ನು ಮಹಿಳೆಯರು ತಪ್ಪಿಸಬಾರದು‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT