ಸಂಡೂರು: ಪಟ್ಟಣದ ಲಕ್ಷ್ಮಿ.ಎಸ್ ನಾನಾವಟೆ ಬಿಎಡ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ಸವಿನೆನಪಿಗಾಗಿ ‘ದಿಗ್ವಿಜಯ ದಿವಸ’ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಮಾತನಾಡಿ, ‘ಆರೋಗ್ಯವಂತ ಯುವಕರ ದಂಡು ಇದ್ದಲ್ಲಿ ಮಾತ್ರ ದೇಶದ ಸಮೃದ್ಧಿ ಭವಿಷ್ಯ ನಿರ್ಮಾಣ ಸಾಧ್ಯ. ಪ್ರತಿಯೊಬ್ಬ ಯುವಕರು ತಮ್ಮ ಕೆಟ್ಟ ಆಲೋಚನೆ, ಜೀವನ ವ್ಯಾಮೋಹದಿಂದ ಹೊರಬಂದು ಉತ್ತಮ ನಾಡು ಕಟ್ಟುವ ಕೆಲಸ ಮಾಡಬೇಕು’ ಎಂದರು.
ಪ್ರಾಚಾರ್ಯ ದೇವರಾಜ್ ಯು, ಮೇಗಳಗೇರಿ ಕೊಟ್ರೇಶ್, ಅಶೋಕ್ ಜಿ.ಎಂ. ಗುಡ್ಡಪ್ಪ, ಸೌಜನ್ಯ ಎಂ. ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಾಶಿಕ್ಷಣಾರ್ಥಿಗಳು ಇದ್ದರು.