ಹಗರಿಬೊಮ್ಮನಹಳ್ಳಿ: ಕೆರೆ ಏರಿ ಭದ್ರಗೊಳಿಸುವ ಕಾಮಗಾರಿ ಕೈಗೆತ್ತಿ ಕೊಳ್ಳುವಂತೆ ನಮ್ಮ ಗ್ರಾಮದ ಜನತೆ ಕಳೆದ ಮೂರು ದಶಕದಿಂದ ಜನಪ್ರತಿನಿ ಧಿಗಳಿಗೆ ಸಲ್ಲಿಸುತ್ತಿರುವ ಮನವಿಗಳು ಕಸದ ಬುಟ್ಟಿಯ ಪಾಲಾಗಿವೆ. ಕುಡಿಯುವ ನೀರಿನ ಬವಣೆಯ ಜೊತೆಗೆ ಅಂತರ್ಜಲ ಕುಸಿತದ ಭೀತಿಯಲ್ಲಿ ಅತಂತ್ರವಾಗಿರುವ ನಮ್ಮ ಕೃಷಿ ಚಟುವಟಿಕೆಗಳನ್ನು ಸುಸ್ಥಿರ ಸ್ಥಿತಿಗೆ ತರಲು ಪ್ರಯತ್ನಿಸದಿರುವುದು ದುರಂತ
ತುಂಗಭದ್ರಾ ಜಲಾಶಯ ನಿರ್ಮಾಣ ವಾದ ಹಿನ್ನೆಲೆಯಲ್ಲಿ ಸಂಪದ್ಭರಿತ ಹೊಲ ಗದ್ದೆ ಮನೆಗಳನ್ನು ಕಳೆದುಕೊಂಡು ನಿರ್ವಸಿತರಾಗಿದ್ದು, ಈಗ ತಾಲ್ಲೂಕಿನ ಅದೇ ತುಂಗಭದ್ರಾ ನದಿ ದಂಡೆಯ ಗ್ರಾಮ ಬಾಚಿಗೊಂಡನಹಳ್ಳಿಯಲ್ಲಿ ನೆಲೆಯೂರಿರುವ ಜನತೆ ಈ ವರದಿಗಾರನ ಬಳಿ ನುಡಿದ ಮಾತು ಗಳಲ್ಲಿ ಹತಾಶೆಯಿದೆ, ಪಕ್ಕದಲ್ಲಿಯೆ ವಿಪುಲ ಜಲರಾಶಿಯಿದ್ದರೂ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿಲ್ಲ ಎಂಬ ನೋವಿದೆ. ಸ್ಪಂದಿಸದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶವಿದೆ.

ಕೃಷಿಕರೇ ಹೆಚ್ಚಾಗಿ ವಾಸವಾಗಿರುವ ಈ ಗ್ರಾಮದ ಬಳಿ ಸುಮಾರು 500 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಕೆರೆ ಯೊಂದಿದೆ. ವರ್ಷದ 8 ತಿಂಗಳ ಕಾಲ ಕೆರೆಯಲ್ಲಿ ನೀರು ಸಂಗ್ರ ಹಿಸುವ ಅವಕಾಶವಿದೆ. ಆದರೆ, ಜನಪ್ರತಿನಿಧಿಗಳ ನಿರಾಸಕ್ತಿ ಮತ್ತು ಆಧಿಕಾರಿಗಳ ನಿರ್ಲಕ್ಷ್ಯದ ಕಾರಣ ಗ್ರಾಮದ ಜನ ನೀರಿಲ್ಲದೆ ಆತಂಕದಿಂದ ಬದುಕು ಸವೆಸುತ್ತಿದ್ದಾರೆ. ಸುಮಾರು ಸಾವಿರ ಎಕರೆಯಷ್ಟು ಇರುವ ಬೃಹತ್ ಕೆರೆಯಂಗಳ ತುಂಗಭದ್ರಾ ಜಲಾಶ ಯದ ಹಿನ್ನಿರಿನ ಪ್ರದೇಶದಲ್ಲಿದೆ.

ಜಲಾಶಯ ತುಂಬಿ ದಾಗ ಹಿನ್ನೀರಿ ನಲ್ಲಿ ಮುಳುಗುವ ಈ ಕೆರೆ, ನೀರು ಹಿಂದೆ ಸರಿಯುತ್ತಿದ್ದಂತೆ ತುಂಗಭದ್ರಾ ಹಿನ್ನೀ ರನ್ನು ಸಮರ್ಥವಾಗಿ ಹಿಡಿದಿಟ್ಟು ಕೊಳ್ಳುತ್ತದೆ. ಯಾವುದೇ ಜಲ ಮೂಲ ಗಳಿಲ್ಲದೆ ಸಾವಿರಾರು ಎಕರೆ ಪ್ರದೇಶದಲ್ಲಿ ಅನಾಯಾಸವಾಗಿ ಹೀಗೆ ಅರ್ಧ ಟಿಎಂಸಿ ಅಡಿ ನೀರು ಸಂಗ್ರಹವಾಗುವ ಉದಾಹ ರಣೆ ತಾಲ್ಲೂಕಿನ ಬೇರೆಲ್ಲೂ ಸಿಗುವುದಿಲ್ಲ.

ಮಳೆಗಾದ ದಿನಗಳಲ್ಲಿ ಜಲಾಶಯ ತುಂಬಿದಾಗ ಕೆರೆಯಲ್ಲಿ ಸಂಗ್ರಹವಾಗುವ ನೀರು ಹಾಗೆಯೇ ಕೆರೆಯಲ್ಲಿ ಉಳಿಯ ಬೇಕು. ಬದಲಾಗಿ ಕೆರೆ ನಿರ್ಮಾಣವಾಗಿ 5 ಶತಮಾನ ಕಳೆದಿರುವುದರಿಂದ ಕಾಲನ ದಾಳಿಗೆ ಸಿಲುಕಿ ಎರಡು ಕಡೆ ಶಿಥಿಲ ಗೊಂಡ ಕೆರೆಯ ಏರಿಯ ಮೂಲಕ ಸಂಗ್ರವಾಗಿರುವ ನೀರು ಮತ್ತೆ ಜಲಾನ ಯನ ಪ್ರದೇಶದತ್ತ ಹರಿದು ವ್ಯರ್ಥ ವಾಗಿ ಸಮುದ್ರಕ್ಕೆ ಸೇರುತ್ತಿದೆ ಎಂದು ಗ್ರಾಮದ ಪ್ರಗತಿ ಪರ ರೈತ ಹುರಕಡ್ಲಿ ಶಿವಕುಮಾರ್ ಆತಂಕ ವ್ಯಕ್ತಪಡಿಸುತ್ತಾರೆ.

1983ರಲ್ಲಿ ಗ್ರಾ.ಪಂ.ಅಧ್ಯಕ್ಷ ರಂಗ ನಾಥಸಾ ಕಠಾರೆ ಮತ್ತು ಮುಖಂಡ ಕೆ.ಶಂಕರಗೌಡ ಕೆರೆ ಏರಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಪ್ರಕಾಶರಿಗೆ ಸಲ್ಲಿಸಿದ್ದ ್ಙ35ಲಕ್ಷ ಅನುದಾನದ ಕಾಮ ಗಾರಿಯ ಪ್ರಸ್ತಾವನೆಗೆ ಕೆರೆ ತುಂಗಭದ್ರಾ ಜಲಾಶಯದ ಮಂಡಳಿಯ ಅಧೀನ ದಲ್ಲಿರುವ ಜಲಾನಯನ ಪ್ರದೇಶದಲ್ಲಿದೆ ಎಂಬ ಸಬೂಬು ಹೇಳಿ ತಿರಸ್ಕರಿಸಿದ್ದರು ಎಂದು ರೈತ ಎನ್. ವೀರಬಸಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಏರಿ ಭದ್ರವಾಗಿ ತುಂಗಭದ್ರಾ ಹಿನ್ನೀರು 8 ತಿಂಗಳ ಕಾಲ ಈ ಕೆರೆಯಲ್ಲಿ ಸಂಗ್ರಹವಾದರೆ, ಬಾಚಿಗೊಂಡನ ಹಳ್ಳಿ ಸೇರಿದಂತೆ ತುಂಗಭದ್ರಾ ಜಲಾಶಯದ ಹಿನ್ನೀರಿನ ಸುತ್ತಮುತ್ತಲಿನ ಸೆರಗಂಚಿನ ಹತ್ತಾರು ಹಳ್ಳಿಗಳು ಕುಡಿಯುವ ನೀರು ಮತ್ತು ಅಂತರ್ಜಲ ಕುಸಿತದ ಬವಣೆ ಎಂದಿಗೂ ಅನುಭವಿಸುವುದಿಲ್ಲ. ಈ ಹಳ್ಳಿ ಗಳಲ್ಲಿ ಸುಸ್ಥಿರ ಕೃಷಿ ಕೈಗೊಂಡು ರೈತರು ನೆಮ್ಮದಿಯ ಜೀವನ ನಡೆಸಬಹುದಾದ ಸಾಧ್ಯತೆಗಳಿವೆ ಎಂದು ಮಾಲವಿ ಆನಂದ್ ಅಭಿಪ್ರಾಯಪಡುತ್ತಾರೆ.

ಕೂಡಲೆ ಕೆರೆ ಏರಿಯನ್ನು ಭದ್ರಪಡಿಸುವ ಜೊತೆಗೆ ಇನ್ನೂ 5 ಅಡಿ ಏರಿಯನ್ನು ಎತ್ತರಿಸುವ ಕಾಮಗಾರಿಗೆ ಪೂರಕ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಗ್ರಾಮದ ಗ್ರಾ.ಪಂ.ಸದಸ್ಯರಾದ ವೈ.ಶಿವಾನಂದ್, ಕೆ.ಅಲ್ಲಾಭಕ್ಷಿ ಹಾಗೂ ರೈತ ದೊಡ್ಡಬಸಪ್ಪ ನೂತನ ಶಾಸಕ ಭೀಮಾನಾಯ್ಕ ಅವರನ್ನು ಮತ್ತಿತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.