ಭಾನುವಾರ, ಜೂನ್ 26, 2022
28 °C

ದೊಡ್ಡಬಳ್ಳಾಪುರ: ಬಾಲಸೇವಾ ಯೋಜನೆ ಸದ್ಬಳಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಕೋವಿಡ್‌ನಿಂದಾಗಿ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ರಕ್ಷಣೆ, ಪೋಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಘೋಷಿಸಿವೆ. ಇಂತಹ ಮಕ್ಕಳಿದ್ದರೆ ಕೂಡಲೇ ಸಂಬಂಧಿಕರು ಅಧಿಕಾರಿಗಳಿಗೆ ತಿಳಿಸಬೇಕು’ ಎಂದು ಡಿವೈಎಸ್‌ಪಿ ಟಿ. ರಂಗಪ್ಪ ಹೇಳಿದರು.

ನಗರದ ಗಂಗಾಧರಪುರ ಬಡಾವಣೆಯಲ್ಲಿ ಜನಸಹಾಯ ಕೆಸಿವಿಟಿ ಹಾಗೂ ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆಯಿಂದ ನಡೆದ ಆರೋಗ್ಯ ತಪಾಸಣೆ ಹಾಗೂ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

ಸರ್ಕಾರ ಅನಾಥವಾದ ಮಕ್ಕಳಿಗಾಗಿ ಬಾಲಸೇವಾ ಯೋಜನೆ ಪ್ರಕಟಿಸಿದೆ. ಮಾಸಿಕ ₹ 3,500 ಸಹಾಯಧನ ನೀಡಲಿದೆ. ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳಿಗೆ ಹೆತ್ತವರು ಇಲ್ಲದಿದ್ದಲ್ಲಿ ಅಂಥವರನ್ನು ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಿಸಿ ಆರೈಕೆ ಮಾಡಲಾಗುವುದು ಎಂದರು.

ತಹಶೀಲ್ದಾರ್ ಟಿ.ಎಸ್. ಶಿವರಾಜು ಮಾತನಾಡಿ, ಕೊರೊನಾ ಎದುರಿಸಲು ನಮ್ಮಲ್ಲಿನ ಆತ್ಮಸ್ಥೈರ್ಯ, ಧನಾತ್ಮಕ ಮನೋಭಾವವೇ ಏಕೈಕ ಮಾರ್ಗವಾಗಿದೆ. ಯಾವುದೇ ದೊಡ್ಡ ಆಸ್ಪತ್ರೆ, ಲಕ್ಷಗಟ್ಟಲೆ ಖರ್ಚು ಮಾಡಿದರು ಕೊನೆಗೆ ನಮ್ಮೊಳಗಿನ ಧೈರ್ಯವೇ ನಮ್ಮ ಜೀವ ಉಳಿಸುವುದು. ಹೀಗಾಗಿ ಯಾವೊಬ್ಬ ಕೊರೊನಾ ಸೋಂಕಿತ ವ್ಯಕ್ತಿಯೂ ಎದೆಗುಂದಬಾರದು ಎಂದರು.

ಕೆಸಿವಿಟಿ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ ಮಾತನಾಡಿದರು. ಮುಖಂಡರಾದ ಡಾ.ಶೇಖ್‌ ಸೆಹ್ರಾನ್, ನವೀನ್‌ಕುಮಾರ್, ಲೋಕೇಶ್, ಛಲವಾದಿ ಸುರೇಶ್, ಸಾಬೀರ್, ಜಗನ್ನಾಥ, ಮುತ್ತುರಾಜು, ಗಂಗಾಧರ್, ನವೀದ್, ಭರತ್, ಶಂಕರ್, ಪ್ರಕಾಶ್, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಮುನಿರತ್ನಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು