ಆನೇಕಲ್: ಪಟ್ಟಣದ ಹೊರ ವಲಯದಲ್ಲಿ ಸುಸಜ್ಜಿತ ನ್ಯಾಯಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿದರು.

ನ್ಯಾಯಾಲಯ ಮತ್ತು ಆಸ್ಪತ್ರೆಯಲ್ಲಿ ಜನಸಂಖ್ಯೆ ಕಡಿಮೆ ಇದ್ದಾಗ ಆರೋಗ್ಯಕರ ಸಮಾಜ ನಿರ್ಮಾಣವಾಗಿದೆ ಎಂಬುದು ತಿಳಿಯುತ್ತದೆ. ಆನೇಕಲ್ ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣಗಳಿವೆ. 800ಕ್ಕೂ ಹೆಚ್ಚು ಮಂದಿ ವಕೀಲರಿದ್ದಾರೆ. ಇಲ್ಲಿಗೆ ಹೆಚ್ಚಿನ ಸೌಲಭ್ಯವುಳ್ಳ, ಸುಸಜ್ಜಿತ ನ್ಯಾಯಾಲಯ ಅಗತ್ಯವಿದೆ. ಹೀಗಾಗಿ ಆನೇಕಲ್ ಹೊರವಲಯದಲ್ಲಿ ಸುಸಜ್ಜಿತ ಸೌಲಭ್ಯವುಳ್ಳ ನ್ಯಾಯಾಲಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಸಂಸದರ ನಿಧಿ ಮತ್ತು ಸಿಎಸ್ಆರ್ ಅನುದಾನದಲ್ಲಿ ಇ-ಗ್ರಂಥಾಲಯ ಆರಂಭಿಸಲಾಗುವುದು. ನ್ಯಾಯಾಲಯದ ಆವರಣದಲ್ಲಿ ಹೈಮಾಸ್ಟ್ ದೀಪ ಸೇರಿದಂತೆ ಇನ್ನಿತರ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು ಎಂದರು.

ಗಾಳಿ ಸುದ್ದಿ–ಸಾಮಾಜಿಕ ರೋಗ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಗಾಳಿಸುದ್ದಿಯನ್ನು ಜನರು ಹೆಚ್ಚು ನಂಬುತ್ತಿದ್ದಾರೆ. ಸಾಮಾಜಿಕ ಜಾಲತಾಣವು ಸಮಾಜವನ್ನು ಜಾಲಾಡುತ್ತಿದೆ. ಇದರಿಂದ ಹೊಸ ರೀತಿಯ ಸಾಮಾಜಿಕ ರೋಗ ಆರಂಭವಾಗಿದೆ. ಇದರಿಂದಲೇ ಹೆಚ್ಚು ವಿಧ್ವಂಸಕ ಕೃತ್ಯಗಳನ್ನು ವಿದ್ಯಾವಂತರೇ ಮಾಡುತ್ತಿರುವುದು ದುಃಖದ ಸಂಗತಿ ಎಂದು ಬೇಸರಿಸಿದರು.

ನಕಾರತ್ಮಾಕ ಚಿಂತನೆ ಸಾಮಾಜಿಕ ಭಯೋತ್ಪಾದನೆ: ಜನರಲ್ಲಿ ನಕಾರತ್ಮಕ ಚಿಂತನೆಯಿರಬಾರದು. ನಕಾರತ್ಮಾಕ ಚಿಂತನೆಯು ಸಾಮಾಜಿಕ ಭಯೋತ್ಪಾದನೆಯಿದ್ದಂತೆ ನಮ್ಮ ಮಾತು ನಮ್ಮ ಸಂಸ್ಕಾರ ಮತ್ತು ಪರಂಪರೆಯನ್ನು ಸೂಚಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ಉತ್ತಮ ಸಂಸ್ಕಾರ ಪಡೆಯಬೇಕು. ಭಾರವಿಲ್ಲದ ದುಡ್ಡಿಗೆ ಭಾವನೆ ಅರ್ಥವಾಗುವುದಿಲ್ಲ ಹಾಗಾಗಿ ಪ್ರತಿಯೊಬ್ಬರು ಹಣಕ್ಕೆ ಬೆಲೆ ನೀಡದೇ ಗುಣಕ್ಕೆ ಬೆಲೆ ನೀಡಬೇಕು ಮತ್ತು ನ್ಯಾಯದ ಪರವಾಗಿ ನಿಲ್ಲಬೇಕು ಎಂದರು.

ವಕೀಲರು ತಮ್ಮ ಕಕ್ಷಿದಾರರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಬೇಕು. ವಾದಪತ್ರ, ಪ್ರತಿ ವಾದಪತ್ರಗಳನ್ನು ಕನ್ನಡದಲ್ಲಿಯೇ ಮಾಡುವುದರಿಂದ ಅಲ್ಲಿನ ಸಾರಾಂಶ ಪ್ರತಿಯೊಬ್ಬರಿಗೂ ತಿಳಿಯುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಪಟಾಪಟ್ ತಿಳಿಳಿಸಿದರು.

ಆನೇಕಲ್ ನ್ಯಾಯಾಲಯದಲ್ಲಿ ಇ-ಗ್ರಂಥಾಲಯ ನಿರ್ಮಿಸಲು ಸಂಸದರು ಅನುದಾನ ನೀಡಬೇಕು, ತಾಂತ್ರಿಕ ವಿಚಾರದಲ್ಲಿ ವಕೀಲರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಸದರಿಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಲಾಯಿತು.

ವಕೀಲರು ಮತ್ತು ವಕೀಲರ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಗಾಯನ, ಏಕಪಾತ್ರಭಿನಯ, ನಾಟಕ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.

ವಕೀಲ ವೃತ್ತಿಯಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿ.ನಾರಾಯಣಸ್ವಾಮಿ, ವಿಶ್ವನಾಥರೆಡ್ಡಿ, ಷಣ್ಮುಗಂ, ಜಿ.ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಆನೇಕಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್, ಕೃಷ್ಣರಾಜ್, ಮಂಜುನಾಥ್, ಶಂಕರರೆಡ್ಡಿ, ರಕ್ಷತ, ಜನಾರ್ಧನ್, ಶಿಕ್ಷಣ ತಜ್ಞ ಜಿ.ಮುನಿರಾಜು, ವಕೀಲರ ಸಂಘದ ಉಪಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ರವೀಶ್, ಖಜಾಂಚಿ ಶಾರದಮಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ್.ಆರ್, ಪುರುಷೋತ್ತಮ್, ನಿರ್ಮಲ, ಲಕ್ಷ್ಮೀಸಂಪತ್, ತಿಮ್ಮರಾಜು, ಮುರಳಿ, ಮೋಹನ್, ನೀಲಮ್ಮ, ನಾಗರತ್ನ, ನಾಗರಾಜು, ವಕೀಲರಾದ ಮಡಿವಾಳ ಮಣಿ, ಆರ್.ವಿ.ಮೂರ್ತಿ, ಬಿಕ್ಕನಹಳ್ಳಿ ವೆಂಕಿ ಇದ್ದರು.

ಕನ್ನಡ ಕನ್ನಡಕವಾಗಬಾರದು ಕಣ್ಣಾಗಬೇಕು

ಕನ್ನಡವು ಕನ್ನಡಕವಾಗವಾಗಬಾರದು ಕಣ್ಣಾಗಬೇಕು. ಏನಾದರೂ ತಿಳಿಯದಿದ್ದಾಗ ಮಾತ್ರ ಕನ್ನಡಕ ಬಳಸುವಂತೆ ಇತರೆ ಭಾಷೆಯನ್ನು ಬಳಸಬೇಕು. ವರ್ಷದ 365 ದಿನಗಳೂ ಸಹ ಕನ್ನಡ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.