ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ಐಎಸ್ಬಿಆರ್ ಕಾಲೇಜಿನಲ್ಲಿ ಶನಿವಾರ ನಡೆದ ‘ಶೈಕ್ಷಣಿಕ ಚಟುವಟಿಕೆಯಲ್ಲಿ ವಿಜ್ಞಾನದ ಪಾತ್ರ’ ವಿಚಾರ ಸಂಕಿರಣ ಮತ್ತು ಪಿಜಿಡಿಎಂ ತರಗತಿಗಳ ಉದ್ಘಾಟನೆಗೆ ಬಂದ ಅತಿಥಿಗಳಿಗೆ ಸೀರೆಯುಟ್ಟ ರೋಬೊ ಗುಲಾಬಿ ನೀಡಿ ಸ್ವಾಗತಿಸಿತು. ವೇದಿಕೆ ಕಾರ್ಯಕ್ರಮ ಉದ್ಘಾಟನೆಗೆ ದೀಪ ಬೆಳಗಿಸಲು ಮೊಂಬತ್ತಿಯನ್ನೂ ತಂದು ಕೊಟ್ಟಿತು.

ಮುಂದಿನ ಯುಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿದೆ. ಜನರ ದೈನಂದಿನ ಬದುಕಿನಲ್ಲಿ ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸಲಿದೆ. ಇದರಿಂದ ಕ್ರಾಂತಿಕಾರಕ ಬದಲಾವಣೆ ನಡೆಯಲಿದೆ ಎಂದು ಟಾಟಾ ಹಿಟಾಚಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕಿರು ಉದ್ಯಮ ಸ್ಥಾಪಿಸುವ ಗುರಿ ಹೊಂದಿರಬೇಕು ಎಂದು ಗ್ಲೋಬಲ್ ಇಂಕ್ ಕಂಪನಿ ಸಿಇಒ ಸುಹಾಸ್ ಗೋಪಿನಾಥ್ ಸಲಹೆ ಮಾಡಿದರು.

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ನಿರ್ದೇಶಕ ಡಾ.ಸಂಜಯ್ ತ್ಯಾಗಿ, ಐಎಸ್ಬಿಆರ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮನಿಷ್ ಕೊತಾರಿ, ನೀನ್ಲಿಪ್ ಕಂಪನಿ ನಿರ್ದೇಶಕಿ ವೃಷ ರಘು, ಕಾಲೇಜಿನ ಆಡಳಿತ ಮಂಡಳಿಯ ಆನಂದ್ ರಾಮ್, ಮನೋಹರ್, ಚಂದ್ರ ನಿರಂಜನ್, ನೀಲಾ, ಕವಿತಾ ಮಧುಸೂದನ್, ಲಕ್ಷ್ಮೀನಾರಾಯಣ್, ನರಸಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.