ಆನೇಕಲ್: ಬೊಮ್ಮನಹಳ್ಳಿ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಗುರುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದಾಪುರ ನಿವಾಸಿ ಯಶಸ್ವಿನಿ (23) ಆತ್ಮಹತ್ಯೆ ಮಾಡಿಕೊಂಡವರು. ಸರ್ಕಾರಿ ಶಾಲಾ ಶಿಕ್ಷಕಿ ಪರಿಮಳ ಮತ್ತು ಬೋದೇವಯ್ಯ ಅವರ ಮಗಳು. ಓರಲ್ ಮೆಡಿಸಿನ್ ಮತ್ತು ರೇಡಿಯಾಲಾಜಿ ವಿಭಾಗದ ಮೂರನೇ ವರ್ಷದಲ್ಲಿ ಓದುತ್ತಿದ್ದರು.

ಕಾಲೇಜಿಗೆ ರಜೆ ಹಾಕಿ ಮರುದಿನ ತೆರಳಿದಾಗ ಬೋಧಕರೊಬ್ಬರು ಅವಮಾನಕರವಾಗಿ ಮಾತನಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಹಪಾಠಿಗಳು ಯಶಸ್ವಿನಿ ಪರ ಘೋಷಣೆ ಕೂಗಿದರು.

‘ಯಶಸ್ವಿನಿ ಒಬ್ಬಳೇ ಮಗಳು. ವೈದ್ಯೆ ಆಗುವ ಕನಸು ಕಂಡಿದ್ದೇವು. ಆದರೆ, ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆತ್ಮಹತ್ಯೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಮಗಳು ಸೂಕ್ಷ್ಮ ಸ್ವಭಾವದವಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ’ ಎಂದು ಮೃತರ ತಾಯಿ ಪರಿಮಳ ತಿಳಿಸಿದರು.

ಚಂದಾಪುರ ಸೂರ್ಯಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.