ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ಈಜಲು ಹೋದ ಬಾಲಕ ಸಾವು– ಮೃತದೇಹಕ್ಕಾಗಿ ಹುಡುಕಾಟ

Published 16 ಜೂನ್ 2024, 15:57 IST
Last Updated 16 ಜೂನ್ 2024, 15:57 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಬಳ್ಳೂರು ಕೆರೆಯಲ್ಲಿ ಭಾನುವಾರ ಕೆರೆಯಲ್ಲಿ ಈಜಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಧನುಷ್‌(15) ಮೃತ ಬಾಲಕ.

ಧನುಷ್‌ ಮೃತದೇಹಕ್ಕಾಗಿ ಪೊಲೀಸ್‌ ಮತ್ತು ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದೆ. ರಾತ್ರಿ 8.30ಗಂಟೆಯಾದರೂ ಮೃತ ದೇಹ ಸಿಕ್ಕಿರಲಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.

ಅತ್ತಿಬೆಲೆಯಲ್ಲಿ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಧನುಷ್‌ ಭಾನುವಾರ ಕ್ರಿಕೆಟ್‌ ಆಡಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಎನ್ನಲಾಗಿದೆ. ಧನುಷ್‌ ತನ್ನ ಸ್ನೇಹಿತರೊಂದಿಗೆ ಬಳ್ಳೂರು ಕೆರೆಯಲ್ಲಿ ಈಜಾಡಲು ಹೋಗಿದ್ದಾನೆ.

ಈ ಸಂದರ್ಭದಲ್ಲಿ ಧನುಷ್‌ ನೀರಿನಲ್ಲಿ ಮುಳುಗಿ ಹೋಗಿದ್ದು ಜೊತೆಯಲ್ಲಿದ್ದ ಸ್ನೇಹಿತರು ಓಡಿ ಬಂದು ಧನುಷ್‌ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮೃತ ದೇಹದ ಹುಡುಕಾಟದಲ್ಲಿ ತೊಡಗಿರುವ ಅಗ್ನಿಶಾಮಕದಳ ಮತ್ತು ಪೊಲೀಸ್‌ ಸಿಬ್ಬಂದಿ
ಮೃತ ದೇಹದ ಹುಡುಕಾಟದಲ್ಲಿ ತೊಡಗಿರುವ ಅಗ್ನಿಶಾಮಕದಳ ಮತ್ತು ಪೊಲೀಸ್‌ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT