ಆನೇಕಲ್: ತಾಲ್ಲೂಕಿನ ವಿವಿಧಡೆ ಓಣಂ ಹಬ್ಬವನ್ನು ಕೇರಳದ ನಿವಾಸಿಗಳು ವಿಜೃಂಭಣೆಯಿಂದ ಶುಕ್ರವಾರ ಆಚರಿಸಿದರು. ರಂಗು ರಂಗಿನ ರಂಗೋಲಿಗಳು ಮತ್ತು ಹೂವಿನ ಅಲಂಕಾರ ಗಮನ ಸೆಳೆಯಿತು.

ತಾಲ್ಲೂಕಿನ ಚಂದಾಪುರದ ಮನೆಯೊಂದರಲ್ಲಿ ಅಲಂಕೃತ ರಂಗೋಲಿ ಮತ್ತು ದೀಪಾಲಂಕಾರಗಳೊಂದಿಗೆ ಓಣಂ ಹಬ್ಬ ಆಚರಿಸಲಾಯಿತು. ಮಹಿಳೆಯರು ನೃತ್ಯ ಮಾಡುವ ಮೂಲಕ ಹಬ್ಬಕ್ಕೆ ಮೆರಗು ನೀಡಿದರು.

ತಾಲೂಕಿನ ವಿವಿಧ ಅಪಾರ್ಟ್ಮೆಂಟ್ಗಳಲ್ಲಿ ಓಣಂ ಸಂಭ್ರಮ ಮನೆ ಮಾಡಿತು. ಕೇರಳ ಶೈಲಿಯ ಅಡುಗೆ ಮಾಡಿ ಬಾಳೆ ಎಲೆಯಲ್ಲಿ ಅಲಂಕಾರ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೋಟೆಲ್ಗಳಲ್ಲಿಯೂ ಓಣಂ ಹಬ್ಬದ ಪ್ರಯಕ್ತ ಕೇರಳ ಶೈಲಿಯ ಅಡುಗೆ ಮಾಡಲಾಗಿತ್ತು. ಕೆಲವು ಐಟಿ ಕಂಪನಿಗಳು, ಶಾಲಾ ಕಾಲೇಜುಗಳಲ್ಲಿ ಓಣಂ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.