ಆನೇಕಲ್: ಆನೇಕಲ್ ಪುರಸಭೆ ವ್ಯಾಪ್ತಿಯ ಥಳಿ ರಸ್ತೆಯಲ್ಲಿ ಮಧ್ಯ ಭಾಗದಲ್ಲಿಯೇ ಒಳಚರಂಡಿಯ ಗುಂಡಿ ಬಾಯ್ತೆರಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಳೆದ ಮೂರು ದಿನಗಳಿಂದಲೂ ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನ ಸವಾರರು ಸಂಜೆಯ ನಂತರ ರಸ್ತೆಯಲ್ಲಿ ಸಂಚರಿಸಲು
ಆಗುತ್ತಿಲ್ಲ.

ಆನೇಕಲ್ನ ಥಳೀ ರಸ್ತೆಯ ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಮೇಲ್ಪದರ ಕಿತ್ತುಹೋಗಿ ಗುಂಡಿ ಬಿದ್ದಿದೆ. ಅಪಾಯ ತಪ್ಪಿಸಲು ಲು ಮತ್ತು ಬ್ಯಾರಿಕೇಡ್ ಇಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಗಮನ ವಹಿಸಿ ರಸ್ತೆ ಮಧ್ಯದಲ್ಲಿರುವ ಯುಜಿಡಿಯ ಗುಂಡಿಯನ್ನು ಮುಚ್ಚಿಸಬೇಕು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಥಳೀ ರಸ್ತೆಯಲ್ಲಿ ಸಂಚರಿಸುವವರ ಬೇಡಿಕೆ.

ಥಳೀ ರಸ್ತೆಯ ವಿಸ್ತರಣೆ ಬಳಿಕ ರಸ್ತೆಯಲ್ಲಿ ವಾಹನಗಳು ವೇಗವಾಗಿ ಓಡಾಡುತ್ತವೆ. ಯುಜಿಡಿ ಗುಂಡಿ ಬಿದ್ದಿರುವುದುರಿಂದ ಅಪಾಯಕ್ಕೆ ದಾರಿ ತೋರಿದಂತಾಗುತ್ತದೆ. ರಸ್ತೆಯಲ್ಲಿರುವ ಗುಂಡಿಯನ್ನು ಮುಚ್ಚಬೇಕು ಎಂದು ಸ್ಥಳೀಯರಾದ ಮುನಿರಾಜು
ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.