ಆನೇಕಲ್: ರಾಜಕಾಲುವೆಯಲ್ಲಿ ಹೂಳು ತೆಗೆಯದ ಹಾಗೂ ಸ್ವಚ್ಛತೆ ಮಾಡಿದ ಕಾರಣ ತಾಲ್ಲೂಕಿನೆಲ್ಲೆಡೆ ಶುಕ್ರವಾರ ಸುರಿದ ಭಾರಿ ಮಳೆಯಿಂದ ರಾಜಕಾಲುವೆ ನೀರು ತಾಲ್ಲೂಕಿನ ಹುಸ್ಕೂರು ಸಮೀಪದ ಗಟ್ಟಹಳ್ಳಿಯಲ್ಲಿ ಮನೆಗಳಿಗೆ ನುಗಿತ್ತು. ಭಾರಿ ಮಳೆಯಿಂದಾಗಿ ವೀರಸಂದ್ರ, ಎಲೆಕ್ಟ್ರಾನಿಕ್ಸಿಟಿ ರಸ್ತೆಗೆ ಮಳೆ ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ತಾಲ್ಲೂಕಿನ ಗಟ್ಟಹಳ್ಳಿಯ ಪಿಯೋನಿಕರ್ ರೆಸಿಡೆನ್ಸಿ ಬಡಾವಣೆಗೆ ಶುಕ್ರವಾರ ಸುರಿದ ಭಾರಿ ಮಳೆಯಿಂದ ರಸ್ತೆಗಳು ಕೆರೆಯಂತಾಗಿದ್ದವು. ನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತ್ತಗೊಂಡಿದ್ದವು. 10ಕ್ಕೂ ಹೆಚ್ಚು ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮೋಟಾರ್ ಮೂಲಕ ಪಂಪ್ ಮಾಡಿ ಮನೆಗೆ ನುಗ್ಗಿದ ನೀರನ್ನು ಹೊರಗೆ ಹಾಕಲಾಯಿತು. ಜಲಾವೃತಗೊಂಡಿರುವ ಬಡಾವಣೆಯಲ್ಲಿ ಓಡಾಡಲು ಜನ ಪರದಾಡುತ್ತಿದ್ದಾರೆ.

ರಾಜಕಾಲುವೆಯನ್ನು ಸ್ವಚ್ಛಗೊಳಿಸಿ, ದುರಸ್ತಿಗೊಳಿಸದ ಕಾರಣ ಪ್ರತಿಬಾರಿಯೂ ಮಳೆ ಸುರಿದಾಗ ಮನೆಗಳಿಗೆ ನೀರು ನುಗುತ್ತಿದೆ.

ತಾಲ್ಲೂಕಿನ ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಬನ್ನೇರುಘಟ್ಟಗಳಲ್ಲಿಯೂ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ಹರಿಯಿತು. ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡಿದರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಮಳೆಯಿಂದ ಸಾರ್ವಜನಿಕರ ಪರದಾಟ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.