ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸ್ಕೂರು ಬಳಿ ರೌಡಿಶೀಟರ್ವೊಬ್ಬ ಮತ್ತೊಬ್ಬ ರೌಡಿಶೀಟರ್ನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾನೆ.

ಕಾರ್ತಿಕ್ ಅಲಿಯಾಸ್ ಜೆ.ಕೆ ಸಲಗ ಎಂಬ ರೌಡಿಶೀಟರ್ನನ್ನು ಗಂಗಾ ಎಂಬ ಮತ್ತೊಬ್ಬ ರೌಡಿಶೀಟರ್ ತನ್ನ ತಂಡದೊಂದಿಗೆ ಹುಸ್ಕೂರು ಬಳಿ ಅಪಹರಿಸಿ ತಮಿಳುನಾಡಿನ ಹೊಸೂರಿಗೆ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.

ನಂತರ ಹುಸ್ಕೂರು ರಸ್ತೆ ಬದಿಯಲ್ಲಿ ಬಿಟ್ಟು ವಿಷಯವನ್ನು ಕಾರ್ತಿಕ್ ಪತ್ನಿಗೆ ಕರೆ ಮಾಡಿ ತಿಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಕಾರ್ತಿಕ್ನನ್ನು ಸ್ಥಿತಿ ಚಿಂತಾಜನಕವಾಗಿದ್ದು ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣವೊಂದರಲ್ಲಿ ಕಾಲಿಗೆ ಗುಂಡೇಟು ಬಿದ್ದ ನಂತರ ಜೈಲು ಸೇರಿದ್ದ ಕಾರ್ತಿಕ ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.