ಆನೇಕಲ್ : ತಾಲ್ಲೂಕಿನ ಅತ್ತಿಬೆಲೆಯಲ್ಲಿ ಊರ ಹಬ್ಬದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಅತ್ತಿಬೆಲೆಯ ನೂರಾರು ಮಂದಿ ಮಹಿಳೆಯರು ಅಲಂಕೃತ ದೀಪಗಳನ್ನು ಹೊತ್ತು ಅತ್ತಿಬೆಲೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೀಪಗಳನ್ನು ದೇವಿಯರಿಗೆ ಸಲ್ಲಿಸಿದರು.

ಅಲಂಕೃತ ದೀಪಾರತಿಗಳನ್ನು ಹೊತ್ತು ಮಹಿಳೆಯರು ತಮಟೆ ಸೇರಿದಂತೆ ಜಾನಪದ ಕಲಾತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕರಗದ ರೀತಿಯಲ್ಲಿ ದೀಪಗಳನ್ನು ಅಲಂಕಾರ ಮಾಡಲಾಗಿತ್ತು. ಅತ್ತಿಬೆಲೆಯ ಊರಹಬ್ಬದ ಪ್ರಯುಕ್ತ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ವೈಭವದ ಊರಹಬ್ಬಕ್ಕೆ ಅತ್ತಿಬೆಲೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಸಾಕ್ಷಿಯಾದರು.

ಅತ್ತಿಬೆಲೆ ಊರಹಬ್ಬದ ಪ್ರಯುಕ್ತ ಭಾನುವಾರ ಬಾಡೂಟಕ್ಕೆ ಅತ್ತಿಬೆಲೆಯಲ್ಲಿ ಭರ್ಜರಿ ಸಿದ್ದತೆ ನಡೆಸಲಾಗಿದೆ. ಭಾನುವಾರ ಬಾಡೂಟ ಹಿನ್ನೆಲೆಯಲ್ಲಿ ಬಹುತೇಕ ಕಲ್ಯಾಣ ಮಂಟಪದಲ್ಲಿ ಮುಂಗಡ ಬುಕಿಂಗ್ ಮಾಡಲಾಗಿದೆ. ಕಳೆದ ಮೂರು ದಿನಗಳಿಂದಲೂ ಅತ್ತಿಬೆಲೆ ಊರಹಬ್ಬ ನಡೆಯುತ್ತಿದ್ದು ಭಾನುವಾರ ಮುಕ್ತಾಯಗೊಳ್ಳಲಿದೆ. ಅತ್ತಿಬೆಲೆ ಊರಹಬ್ಬದ ಪ್ರಯುಕ್ತ ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ, ಪಟಾಲಮ್ಮ ದೇವಿ ಸೇರರಿದಂತೆ ವಿವಿಧ ದೇವರುಗಳ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ಪಟಾಲಮ್ಮ ದೇವಿ ದೇವಾಲಯದ ಬಳಿ ಮಡಿಲಕ್ಕಿ ಸಮರ್ಪಿಸಲು ಭಕ್ತರ ದಂಡು ಹೆಚ್ಚಾಗಿ ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.