ವಿಜಯಪುರ: ಕೊರೊನಾಗೂ ಮೊದಲು, ಕೋಲಾರದ ಕಡೆ ಬಂದಿದ್ದ ಕುರಿಗಾಹಿಗಳು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಈಗಆನ್‌ಲಾಕ್ ಆಗುತ್ತಿದ್ದಂತೆಯೇ ತಮ್ಮ ಊರಿನತ್ತ ವಾಪಸು ಹೊರಟಿದ್ದಾರೆ.

’ಯಾವುದೇ ಊರಿಗೆ ಹೋದರೂ ಅಲ್ಲಿನ ರೈತರ ಹೊಲಗಳಲ್ಲಿ ತಂಗುತ್ತಿದ್ದೆವು. ಅವರೇ ಊಟದ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿವರ್ಷ ಈ ವಲಸೆಯಿಂದ ಚಿರಪರಿತರಾಗುತ್ತಿದ್ದೇವು. ಬರವುದು ತಡವಾದರೂ ಕರೆ ಮಾಡಿ ವಿಚಾರಿಸುವ ವಾಡಿಕೆ ಇದೆ. ಹೊಲಗಳಲ್ಲಿ ಗೊಬ್ಬರ ಶೇಖರಣೆಯಾಗಲಿ ಎಂಬ ಉದ್ದೇಶದಿಂದ ಕುರಿಗಾಹಿಗಳಿಗೆ ಬೇಡಿಕೆ ಇದೆ. ಇದರಂತೆ ಈ ವರ್ಷವೂ ಫೆಬ್ರುವರಿ ತಿಂಗಳಲ್ಲಿ ವಲಸೆ ಹೋಗಿ ರೈತರ ಹೊಲಗದ್ದೆಗಳಲ್ಲಿ ಬಿಡುಬಿಟ್ಟು ಕಾಲಕಳೆದಂತೆ ಕೊರೊನಾ ವಕ್ಕರಿಸಿಕೊಂಡಿತು‘ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು ಕುರಿಗಾಹಿಗಳು.

ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ರೈತರು ಅನುಮಾನದಿಂದ ನೋಡಲು ಆರಂಭಿಸಿದರು. ಕುಡಿಯಲು ನೀರು ಸಹ ಕೊಡುತ್ತಿರಲಿಲ್ಲ. ಎಷ್ಟೋ ದಿನಗಳು ಉಪವಾಸ ಮಲಗಿದ್ದೇವೆ ಎಂದುಲಾಕ್‌ಡೌನ್ ಸಂದರ್ಭದಲ್ಲಿ ತಾವು ಅನುಭವಿಸಿದ ಕಷ್ಟವನ್ನು ಮಧುಗಿರಿ ತಾಲ್ಲೂಕಿನ ನೇರಳೆಕೆರೆ ಗ್ರಾಮದ ರಂಗನಾಥ್ ಬಿಚ್ಚಿಟ್ಟರು.

ಕೋಲಾರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದಂತೆ ಊರಿನತ್ತ ತೆರಳು ಅವಕಾಶ ಸಿಗಲಿಲ್ಲ. ಲಾಕ್‌ಡಾನ್ ಸಂದರ್ಭದಲ್ಲಿ ಯಾರಾದರೂ ಊಟ ಕೊಟ್ಟರೆ ಅದೇ ಆಸರೆಯಾಗಿತ್ತು. ಹಳ್ಳ – ಕೊಳ್ಳದ ನೀರು ಕುಡಿದು ಜೀವನ ಸಾಗಿಸಬೇಕಾಯಿತು. ಮೊಬೈಲ್‌ಗಳಿಗೆ ಜಾರ್ಚ್ ಇಲ್ಲದೆ ಗ್ರಾಮದ ಸಂಪರ್ಕ ಕಳೆದುಕೊಂಡಿದ್ದೇವು. ಈಗ ಲಾಕ್‌ಡೌನ್ ಹಂತ ಹಂತವಾಗಿ ಮುಗಿಯುತ್ತಾ ಬಂದಿದ್ದು ಊರಿನತ್ತ ಹೊರಟಿರುವುದಾಗಿ ಕುರಿಗಾಹಿಗಳು ಕಷ್ಟ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.