ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದಾಗಿ ಚರ್ಮ ರೋಗಕ್ಕೆ ತುತ್ತಾಗಿರುವ ತಣ್ಣೀರನಹಳ್ಳಿ ಗ್ರಾಮದ ಮಹಿಳೆ ಸಂಗ್ರಹ ಚಿತ್ರ
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಬಿಬಿಎಂಪಿ ಕಸದ ರಾಶಿಯಿಂದ ಹೊರ ಬಂದಿರುವ ಕಲುಷಿತ ನೀರು (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಬಂದಿರುವ ಬೃಹತ್ ಕಸದ ರಾಶಿ(ಸಂಗ್ರಹ ಚಿತ್ರ)
ಕಾನೂನು ಸಮರಕ್ಕೆ ಸಿದ್ಧ ‘ಬಿಬಿಎಂಪಿ ಕಸದ ರಾಶಿ ಇಲ್ಲಿಗೆ ಬಂದು ಬೀಳಲು ಅಡಿಪಾಯ ಹಾಕಿದವರೇ ಇಂದು ಹೆಚ್ಚು ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ನೀಡದಂತಾಗಿದ್ದಾರೆ. ಕಾನೂನು ಸಮರವೊಂದಿ ಕಸದ ಸಮಸ್ಯೆ ಪರಿಹಾರಕ್ಕೆ ಇರುವ ಏಕೈಕ ಮಾರ್ಗ ಎನ್ನುವ ಸತ್ಯವನ್ನು ಅರಿತುಕೊಂಡಿದ್ದಾರೆ. ಕಸದ ರಾಶಿಯಲ್ಲಿ ಮೂರು ಪಕ್ಷಗಳದ್ದು ಸಮಪಾಲಿದೆ. ಯಾರನ್ನೂ ದೂರಿದರು ಉಪಯೋಗ ಇಲ್ಲ’ ಎಂದು ಪರಿಸರ ಕಾಳಜಿಯ ಹೋರಾಟಗಾರ ದಿವಾಕರ್ ತಿಳಿಸಿದರು. ರಾಜಕೀಯ ಲಾಭದ ಸತ್ಯ ಅರಿವಾಗಿದೆ ಕಸ ವಿಲೇವಾರಿ ಘಟಕ ಮುಚ್ಚಿಸುವ ಹಾಗೂ ಬೃಹತ್ ಕಸದ ರಾಶಿಯಿಂದ ಈ ಭಾಗದ ಜನ ಜಾನುವಾರುಗಳಿಗೆ ಆಗುತ್ತಿರುವ ತೊಂದರಗಳನ್ನು ತಪ್ಪಿಸುವ ಸಲುವಾಗಿ ವಿವಿಧ ಮುಖಂಡರು ನಡೆಸಿದ ಹೋರಾಟಗಳು ರಾಜಕೀಯ ಲಾಭಕ್ಕಾಗಿಯೇ ಹೊರತು ಸಮಸ್ಯೆ ಪರಿಹರಿಸುವುದಕ್ಕಾಗಿ ಅಲ್ಲ ಎನ್ನುವ ‘ಸತ್ಯದ’ ಅರಿವಾಗಿದೆ. ಸ್ಥಳೀಯ ಜನ ಹೋರಾಟದ ಬಗ್ಗೆ ಇದ್ದ ಆಸಕ್ತಿ ಕಳೆದುಕೊಂಡಿದ್ದಾರೆ. ಸಮಸ್ಯೆ ಮಾತ್ರ ಹಾಗೆಯೇ ಮುಂದುವರೆದಿದೆ. ಜನ ಜಾನುವಾರುಗಳ ಮೂಕ ರೋಧನೆ ಮುಂದುವರೆದೇ ಇದೆ. ಮೂರು ಪಕ್ಷದ ಮುಖಂಡರು ಪ್ರಚಾರ ಸಭೆಗಳಲ್ಲಿ ಕಸದ ಸಮಸ್ಯೆ ಕುರಿತು ಭಾಷಣ ಮಾಡುವ ನೈತಿಕಯನ್ನೇ ಕಳೆದುಕೊಂಡಿದ್ದಾರೆ ಸಾಮಾಜಿಕ ಕಾರ್ಯಕರ್ತ ಕಾರ್ತಿಕ್ ತಿಳಿಸಿದರು.