ವಿಮಾನ ರದ್ದಾಗಿರುವ ಟಿಕೆಟ್ ಹಣ ಮರು ಪಾವತಿ ಬಗ್ಗೆ ಸಂದೇಶ ರವಾನಿಸಿರುವ ಇಂಡಿಗೊ ಸಂಸ್ಥೆ
100ಕ್ಕೂ ಅಧಿಕ ವಿಮಾನ ರದ್ದು
ಬೆಂಗಳೂರು ಅಲ್ಲದೆ ಹೈದರಾಬಾದ್, ಕೋಲ್ಕತ್ತ ಮತ್ತು ನವದೆಹಲಿ ಸೇರಿದಂತೆ ವಿವಿಧೆಡೆಯಿಂದ ಸಂಚರಿಸಬೇಕಿದ್ದ 100ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಸಂಚಾರ ಬುಧವಾರ ರದ್ದುಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್‌ನಿಂದ ನಿರ್ಗಮಿಸಬೇಕಿದ್ದ ಮತ್ತು ಆಗಮಿಸಬೇಕಿದ್ದ 19 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.