ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆ ನಾಗರಿಕರ ಹಕ್ಕು ಕಸಿಯುವ ಹುನ್ನಾರ

Last Updated 15 ಡಿಸೆಂಬರ್ 2019, 14:47 IST
ಅಕ್ಷರ ಗಾತ್ರ

ದೇವನಹಳ್ಳಿ: ದೇಶದ ಪೌರತ್ವ ಕಾಯ್ದೆ ನಾಗರಿಕರ ಹಕ್ಕನ್ನು ಕಸಿಯುವ ಹುನ್ನಾರ ಹೊರತುಪಡಿಸಿದರೆ ಬೇರೇನೂ ಇಲ್ಲ ಎಂದು ಡಾ.ತಿಪ್ಪಣ್ಣ ಡಾಂಗೇಜಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಗುರುಭವನದಲ್ಲಿ ನಡೆದ ಬಹುಜನ ಕ್ರಾಂತಿ ಮೊರ್ಚಾ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪೌರತ್ವ ಮಸೂದೆ ಮುಸಲ್ಮಾನರನ್ನು ಹೊರತುಪಡಿಸಿದ ಕಾಯ್ದೆ, ಇತರರಿಗೆ ಪೌರತ್ವ ನೀಡಬೇಕು, ಬಹುಸಂಸ್ಕೃತಿ ಧರ್ಮ, ಭಾಷೆಯನ್ನೊಳಗೊಂಡಿರುವ ದೇಶದಲ್ಲಿ ಜಾತ್ಯತೀತ ನಿಲುವು ಇಲ್ಲದಿದ್ದಲ್ಲಿ ರಾಷ್ಟ್ರೀಯ ಏಕತೆಗೆ ಭಂಗ ಬರಲಿದೆ. ಮತದಾನದ ಹಕ್ಕು ಇಲ್ಲವೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಮೌಲ್ಯವಿಲ್ಲವೆ’ ಎಂದು ಪ್ರಶ್ನಿಸಿದರು.

‘ಸಂವಿಧಾನದ ಅಶಯಗಳಿಗೆ ಮೊಳೆ ಹೊಡೆಯವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ. ನಾಗರಿಕ ಹಕ್ಕು ಇಲ್ಲವೆಂದರೆ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಲ್ಲದೆ ಉದ್ಯೋಗ ದೊರಕುವುದಿಲ್ಲ ಮೂಲಭೂತ ಹಕ್ಕುಗಳು ಇಲ್ಲಿದ್ದಿದ್ದರೆ ಮನುಷ್ಯರ ಜೀವ ಪ್ರಾಣಿಗಿಂತ ಕೀಳಾಗುತ್ತದೆ. ಪೌರತ್ವ ಮಸೂದೆ ಎಂಬುದು ಒಂದೇ ಜನಾಂಗವನ್ನು ಬದಿಗಿಡುವ ಪ್ರಯತ್ನ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಭವಿಷ್ಯದಲ್ಲಿ ಇತರ ಸಮುದಾಯಕ್ಕೆ ಅನಿವಾರ್ಯವಾಗಿ ಕಾಯ್ದೆ ರೂಪಿಸಬಹುದು. ಈ ರೀತಿಯಾದರೆ ನಾಲ್ಕು ಶತಮಾನದ ಹಿಂದಿನ ಮನುವಾದಕ್ಕೆ ಹೋದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಕ್ಕಿನ ಜೊತೆಗೆ ಅಸ್ತಿತ್ವ ಕಳೆದುಕೊಳ್ಳವ ಮನುಷ್ಯ ಪಶುಗಳ ರೀತಿ ಜೀವನ ನಡೆಸಬೇಕಾಗುತ್ತದೆ ಸ್ವಾಭಿಮಾನ ಇಲ್ಲಿ ನಗಣ್ಯ, ಸಂವಿಧಾನದಡಿಯಲ್ಲಿ ತ್ವರಿತವಾಗಿ ನ್ಯಾಯ ಸಿಗಬೇಕು ರಾಜ್ಯವನ್ನು ಕಾನೂನು ಆಳಬೇಕೆ ಹೊರತು ಗೂಂಡಾಗಳಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ರಾಜಕೀಯ ಒತ್ತಡದಿಂದ ಅರ್ಹರಿಗೆ ನ್ಯಾಯ ಸಿಗುತ್ತಿಲ್ಲ. ಹೋರಾಟ ಪ್ರತಿಭಟನೆ ಮಾಡಿ ಪ್ರಕರಣ ದಾಖಲಾತಿಗೆ ಒತ್ತಡ ತರಬೇಕಾದ ಸ್ಥಿತಿಗೆ ತಲುಪಿದ್ದೇವೆ. ಎಲ್ಲೆಡೆ ಸಂವಿಧಾನದ ಅಶಯಗಳು ಮಣ್ಣು ಪಾಲು ಆಗುತ್ತಿದೆ’ ಎಂದು ದೂರಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೇ ಮಾಧ್ಯಮ ಅಂಗ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಪ್ರಕರಣದಲ್ಲಿ ವಿಳಂಬಧೋರಣೆ ಅನುಸರಿಸಲಾಯಿತು. ಅವರು ಮರಣ ಹೊಂದಿದ ನಂತರ ಶೂದ್ರ ಸಮುದಾಯದ ಶಶಿಕಲಾ ಜೈಲು ಸೇರಿದರು.

ಕಲ್ಲುಗಳನ್ನು ಕೆತ್ತನೆ ಮಾಡಿ ಗುಡಿ ಕಟ್ಟಿಸಿ ಪೂಜೆ ಮಾಡಿದರೆ ಮನುಧರ್ಮ ಅಥಾವ ಹಿಂದೂ ಧರ್ಮ ಉದ್ಧಾರ ಆಗುವುದಿಲ್ಲ. ದುಡಿಯುವ ಯುವ ಸಮುದಾಯಕ್ಕೆ ಕೆಲಸ ನೀಡಿದರೆ ದೇಶದ ಪ್ರಗತಿ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಜಾತಿ ವ್ಯವಸ್ಥೆ ಕಾನೂನು ಹೆಚ್ಚು ಬಳಕೆಯಾಗುತ್ತಿದೆ., ಇದು ಅಪಾಯಕಾರಿ ಬೆಳವಣಿಗೆ. ದೇಶದಲ್ಲಿರುವ ಶೇಕಡ 15 ರಷ್ಟು ಮೂಲ ನಿವಾಸಿಗರನ್ನು ಮೂಲೆ ಗುಂಪು ಮಾಡುವ ಹುನ್ನಾರ ನಡೆಯುತ್ತಿದೆ., ಸರ್ವೋಚ್ಛ ನ್ಯಾಯಾಲಯ, ಇ.ಡಿ, ಸಿ.ಬಿ.ಐ ಮತ್ತು ಐ.ಟಿ ಸ್ವಾಯತತ್ತ ಸಂಸ್ಥೆಗಳ ಬಲ ಹೀನಗೊಳ್ಳಲು ಕಾರಣಗಳೇನು ಎಂಬುದನ್ನು ಚಿಂತಿಸಬೇಕಾಗಿದೆ ಎಂದು ಹೇಳಿದರು.

ಕೆ.ಪಿ.ಸಿ.ಸಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ, ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ಮುಖಂಡರಾದ ವಕೀಲ ಸಿದ್ದಾರ್ಥ, ಈರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT