ಬುಧವಾರ, ಜನವರಿ 29, 2020
30 °C

ಕುಕ್ಕರ್‌ ಜತೆ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ತಾಲ್ಲೂಕಿನ ಸ್ವಾಭಿಮಾನದ ಹೆಸರಿನಲ್ಲಿ ಸ್ಪರ್ಧೆಗಳಿದಿದ್ದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಗೆಲುವಿನಿಂದಾಗಿ ನಗರದಲ್ಲಿ ಸೋಮವಾರ ಸಂಭ್ರಮ ಮುಗಿಲು ಮುಟ್ಟಿತ್ತು.

ಜನ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಣೆ ನಡೆಸಿದರು. ಮತ ಎಣಿಕೆ ಪ್ರಾರಂಭದ ಸುತ್ತಿನಿಂದಲೂ ಶರತ್ ಬಚ್ಚೇಗೌಡ ಹತ್ತಿರದ ಪ್ರತಿಸ್ಪರ್ಧಿ ಎಂ.ಟಿ.ಬಿ. ನಾಗರಾಜ್ ಅವರಿಗಿಂತ ಮುಂದಿದ್ದರು. ಎಂಟನೇ ಸುತ್ತಿನ ಮತ ಎಣಿಕೆ ಮುಗಿದಾಗಿನಿಂದ ನಗರದಲ್ಲಿ ಶರತ್ ಅಭಿಮಾನಿಗಳು ಪಟಾಕಿ ಸಿಡಿಸಲು ಪ್ರಾರಂಭಿಸಿದರು.

ಶರತ್ ಗೆದ್ದ ವಿಷಯ ತಿಳಿಯುತ್ತಿದ್ದಂತೆ ಅವರ ಪತ್ನಿ ಪ್ರತಿಭಾ ಸೇರಿದಂತೆ ಅಭಿಮಾನಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಶರತ್ ಬಚ್ಚೇಗೌಡರ ಕಚೇರಿಯ ಬಳಿ ಜನರು ಸೇರಿ ಪರಸ್ಪರ ಸಿಹಿ ತಿನಿಸಿ ನಾಯಕನ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು