ಸೂಲಿಬೆಲೆ (ಹೊಸಕೋಟೆ): ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ತಾಯಿ–ಶಿಶು ಮರಣ ಪ್ರಮಾಣವು ಹೆಚ್ಚಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಾಧಿಕಾರಿ ರಮೇಶ್ ಹೇಳಿದರು.

ಹೋಬಳಿಯ ಅತ್ತಿಬೆಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಶು ಅಭಿವೃದ್ದಿ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂಬುದು ಎಲ್ಲರಿಗೂ ತಿಳಿದಿದ್ದರೂ ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸುವುದರಿಂದ ಅಪೌಷ್ಟಿಕತೆ ಉಂಟಾಗುತ್ತಿದೆ. ತಾಯಿ ಮತ್ತು ಮಗು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಅಲ್ಲದೆ ಪ್ರಸವ ವೇಳೆ ಮೃತಪಡುತ್ತಿದ್ದಾರೆ. ಇದರಿಂದ ತಾಯಿ–ಶಿಶು ಮರಣ ಪ್ರಯಾಣ ಜಾಸ್ತಿಯಾಗಿದೆ ಎಂದು ತಿಳಿಸಿದರು.

0–6 ವರ್ಷದೊಳಗಿನ ಶಿಶುಗಳ ಮರಣ ಸಂಖ್ಯೆ ಕಡಿಮೆ ಮಾಡುವುದು, ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸುವಂತೆ ಅರಿವು, ಸಾಧಾರಣ ಮತ್ತು ಕಡಿಮೆ ತೂಕದ ಮಕ್ಕಳಿಗೆ ವಿಶೇಷವಾದ ಆಹಾರ ನೀಡಲು ಪೋಷಕರು ಕಾಳಜಿ ವಹಿಸಬೇಕು

ಇದೆ ಸಂದರ್ಭದಲ್ಲಿ ಗರ್ಭಿಣಿಯರ ಸೀಮಂತ ಹಾಗೂ ಆರೋಗ್ಯ ಜಾಗೃತಿ ಅರಿವು ಜಾಥಾ ಕಾರ್ಯಕ್ರಮ ನೆಡೆಸಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್, ಸದಸ್ಯ ಬಸವರಾಜ್, ಮುಖ್ಯಶಿಕ್ಷಕ ಚಂದ್ರಪ್ಪ, ಶಾಲಾ ಮಾಜಿ ಅಧ್ಯಕ್ಷ ನಾರಾಯಣಗೌಡ, ಬಾಲವಿಕಾಸ ಸಮಿತಿ ಭವಾನಿ, ಬಾಲರಕ್ಷಣ ಉಪನಿರ್ದೇಶಕಿ ಗೀತಾ, ಮುರುಳಿ, ರಾಧ, ಲಕ್ಷ್ಮಿನಾರಾಯಣ್, ಆನಂದ್, ಅಂಗನವಾಡಿ ಶಿಕ್ಷಕಿ ಅಂಬುಜಾ,ಶಾರಧಾ, ಮಾಲಾ, ಲಾವಣ್ಯ, ವೇದ ಇದ್ದರು.

Quote - ಅದೇ ರೀತಿ ಗರ್ಭಿಣಿಯರು ಮತ್ತು ಬಾಣಂತಿಯರು ಮೊಳಕೆ ಕಾಳು ಹಸಿರುತರಕಾರಿ ಮತ್ತು ಸೊಪ್ಪಿನ ಸೇವೆನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಶಿವಮ್ಮ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.