ಸಂಘಟಿತ ಹೋರಾಟದಿಂದ ಸಮುದಾಯದ ಅಭಿವೃದ್ಧಿ

7

ಸಂಘಟಿತ ಹೋರಾಟದಿಂದ ಸಮುದಾಯದ ಅಭಿವೃದ್ಧಿ

Published:
Updated:
Prajavani

ವಿಜಯಪುರ: ಯಾವುದೇ ಸಮುದಾಯ ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಟಿತ ಹೋರಾಟ ಅಗತ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶಂಕರನಾರಾಯಣ ಹೇಳಿದರು.

ಮಹಾಸಭಾ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ಸಮುದಾಯದವರು ಒಳಜಗಳ ಬಿಟ್ಟು ಸಂಘಟಿತವಾಗಿ ಹೋರಾಟ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಗ್ರಾಮಾಂತರ ಜಿಲ್ಲಾ ಬಡಗನಾಡು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹೊಸಕೋಟೆ ಮಂಜುನಾಥ ಮಾತನಾಡಿ, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ವೆಂಕಟನಾರಾಯಣ ಅವರು ಸಂಘಟನೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಅವರನ್ನು ಬೆಂಬಲಿಸಬೇಕಾಗಿದೆ ಎಂದರು.

ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ವಿಶ್ವನಾಥ್, ಮಂಜುನಾಥ್ ಶರ್ಮಾ, ದೇವನಹಳ್ಳಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅದ್ಯಕ್ಷ ದೇ.ಸೂ.ನಾಗರಾಜು, ಉಪಾಧ್ಯಕ್ಷ ದೀಕ್ಷಿತ್, ವಿಜಯಪುರ ಬ್ರಾಹ್ಮಣ ಸೇವಾ ಟ್ರಸ್ಟ್ ಅಧ್ಯಕ್ಷ ಮುರುಳಿ ಭಟ್ಟಾಚಾರ್ಯ, ಉಪಾದ್ಯಕ್ಷ ಎಚ್.ಆರ್.ಶೇಷಗಿರಿರಾವ್, ಎಸ್. ರವಿ, ಜಿ.ಸತೀಶಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !