ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಗೆ ನೀರು ತುಂಬಿಸಲು ₹150 ಕೋಟಿ ವೆಚ್ಚ

ಹೊಸಕೋಟೆಯಲ್ಲಿ ₹600 ಕೋಟಿ ವೆಚ್ಚದ ಕಾಮಗಾರಿಗೆ ಸಿ.ಎಂ, ಡಿ.ಸಿ.ಎಂ ಚಾಲನೆ
Published 11 ಮಾರ್ಚ್ 2024, 6:05 IST
Last Updated 11 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಹೊಸಕೋಟೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಆನೇಕಲ್‌ನಲ್ಲಿ ಬತ್ತಿ ಹೋಗಿದ್ದ ಕೆರೆಗಳನ್ನು  ಕೆ.ಸಿ ವ್ಯಾಲಿ, ಎಚ್‌.ಎನ್‌ ವ್ಯಾಲಿ ಮೂಲಕ ತುಂಬಿಸಲಾಯಿತು. ಅನೇಕಲ್ ಮತ್ತು ಹೊಸಕೇಟೆ, ಕಾಡುಬೀಸನಹಳ್ಳಿ ಕೆರೆಗಳನ್ನು ಕೂಡ ತುಂಬಿಸಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೊಸಕೋಟೆ ತಾಲ್ಲೂಕಿನಲ್ಲಿ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಗಳಿಗೆ ಹೊರತುಪಡಿಸಿ ಉಳಿತ ಎಲ್ಲಾ ಹೋಬಳಿಗಳಿಗೂ ನೀರು ಹರಿದಿದೆ. ಇದರಿಂದ ಅಂಜರ್ತಲವೂ ವೃದ್ಧಿಯಾಗಿ ನೀರಿನ ಸಮಸ್ಯೆ ಕಡಿಮೆಯಾಗಿದೆ.

ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಹೊಸದಾಗಿ ನಂದಗುಡಿ, ಸೂಲಿಬೆಲೆ ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ ಎಂದರು.

ವಿವಿಧ ಯೋಜನೆಗಳ ಮೂಲಕ ಸಂಸ್ಕರಿಸಿದ ಒಟ್ಟು 15.5 ಟಿಎಂಸಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುತ್ತಿದ್ದೇವೆ ಎಂದರು.

ಎರಡು ಹಂತಗಳಲ್ಲಿ ಈ ಯೋಜನೆ ಜಾರಗೆ ತರಲು ಉದ್ದೇಶಿಸಿದ್ದೇವೆ. ಮೊದಲನೆ ಹಂತದಲ್ಲಿ 317 ಕೆರೆಗಳಿಗೆ ₹2,809 ಕೋಟಿ ವೆಚ್ಚದಲ್ಲಿ ಸಂಸ್ಕರಿಸಿದ ನೀರು ಹರಿಸಲಾಗಿದೆ. ಎರಡನೇ ಹಂತದಲ್ಲಿ ₹1,699 ಕೋಟಿ ವೆಚ್ಚದಲ್ಲಿ 392 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಮೊದಲನೆ ಹಂತದಲ್ಲಿ ಹೊಸಕೋಟೆಯ 38 ಕೆರೆಗಳಿಗೆ ಸುಮಾರು ₹150 ಕೋಟಿ ವೆಚ್ಚದಲ್ಲಿ ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಹೋಬಳಿಗಳಿಗೂ ನೀರು ಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ.
ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ.
ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ
ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ

ನಾಲ್ಕು ತಾಲ್ಲೂಕನ್ನು ಉಪನಗರವಾಗಿಸಿ: ಮುನಿಯಪ್ಪ

ಜಿಲ್ಲೆಯ ನಾಲ್ಕೂ ತಾಲ್ಲೂಕನ್ನು ಉಪ ನಗರವಾಗಿ ಅಭಿವೃದ್ಧಿಗೊಳಿಸಿ ಮೆಟ್ರೊ ಕಾವೇರಿ ನೀರು ಕೊಡಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾಗಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲಾ ತಾಲ್ಲೂಕುಗಳಿಗೂ ಕುಡಿಯುವ ನೀರು ಒದಗಿಸಬೇಕು. ಈ ಭಾಗದಲ್ಲಿ 5 ಸಾವಿರ ಕೆರೆಗಳಿವೆ. ಇವುಗಳಿಗೆ ಸಮಗ್ರ ಯೊಜನೆ ಮಾಡಿ ಹೂಳು ತೆಗೆದು ಕೆರೆ ತುಂಬಿಸುವ ಕೆಲಸ ಆಗಬೇಕಿದೆ. ಅದಾದಲ್ಲಿ ಅಂತರ್ಜಲ ತಂತಾನೆ ವೃದ್ಧಿಯಾಗುತ್ತದೆ. ಆಗ ಕೃಷಿಯನ್ನೇ ನಂಬಿರುವ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT