ವಿಜಯಪುರ: ಪುರಸಭೆಯ ಪೌರಕಾರ್ಮಿಕ ಮೇಸ್ತ್ರಿ ಸೀನಪ್ಪ(50) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ವಾರದ ಹಿಂದೆ ನೆಗೆಟಿವ್ ವರದಿ ಬಂದಿತ್ತು.

ಅನಾರೋಗ್ಯದ ಕಾರಣದಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇವರು, ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮರಣೋತ್ತರ ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್
ಬಂದಿದೆ.

ಮೃತ ಪೌರಕಾರ್ಮಿಕನಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಇಲ್ಲಿನ ಅಶೋಕನಗರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಿಂಗಪುರಕ್ಕೆ ಹೋಗಿ ಬಂದಿದ್ದ ಪೌರಕಾರ್ಮಿಕ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ತರಬೇತಿಗಾಗಿ ಸಿಂಗಪುರಕ್ಕೆ ಕಳುಹಿಸಿದ್ದ ತಂಡದಲ್ಲಿ ಪೌರ ಕಾರ್ಮಿಕ ಸೀನಪ್ಪ ಕೂಡಾ ಹೋಗಿ ಬಂದಿದ್ದರು. ಪಟ್ಟಣದಲ್ಲೂ ಕೂಡಾ ಸಿಂಗಪುರದಲ್ಲಿ ಕಲಿತಿರುವುದನ್ನು ಅನುಷ್ಠಾನಗೊಳಿಸುವ ಕನಸು ಹೊತ್ತುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.