ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಆವರಣದಲ್ಲಿ ಧ್ವಜಾರೋಹಣ

Published 15 ಆಗಸ್ಟ್ 2023, 14:05 IST
Last Updated 15 ಆಗಸ್ಟ್ 2023, 14:05 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದ 19ನೇ ವಾರ್ಡ್‌ನ ಮದರಸ ಜಾಮೀಯಾ ದಾವುಲ್ ರೆಹಸಾನ್ ಮಸೀದಿ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜವನ್ನು ಪುರಸಭೆ ಸದಸ್ಯ ರವಿ ನೆರವೇರಿಸಿದರು.

ಪುರಸಭೆ ಸದಸ್ಯ ರವಿ ಮಾತನಾಡಿ, ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯದಲ್ಲಿ ಜಾತಿ, ಮತ, ಧರ್ಮ ಎಂಬ ಬೇಧಬಾವವಿಲ್ಲ. ಎಲ್ಲ ಧರ್ಮೀಯರೂ ರಾಷ್ಟ್ರವನ್ನು ಪ್ರೀತಿಸಬೇಕು. ರಾಷ್ಟ್ರದ ಅಭಿವೃದ್ಧಿ ಮತ್ತು ಏಕತೆಗಾಗಿ ದುಡಿಯಬೇಕು ಎಂದರು.

ಮಸೀದಿಯ ಸಮಿತಿ ಸದಸ್ಯ ಮೌಲಾನಾ ನಜೀರ್ ಅಹಮದ್ ಮಾತನಾಡಿ, ಹಲವರು ಜಾತಿ, ಮತ, ಬೇಧ  ಮರೆತು ಹೋರಾಟ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾಗಿರುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದರು. ಮುಖಂಡರಾದ ಶಹಬುದ್ಧಿನ್, ಇನಾಯಿತ್ ಉಲ್ಲಾ, ನಿಸಾರ್ ಅಹಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT