ಓಂ ಶಕ್ತಿ ದೇವಾಲಯದಲ್ಲಿ ಗಂಜಿಪೂಜೆ

ವಿಜಯಪುರ: ಶ್ರಾವಣಮಾಸದ ಅಂಗವಾಗಿ ಇಲ್ಲಿನ ರಹಮತ್ ನಗರದಲ್ಲಿನ ಭಾನುವಾರ ಓಂಶಕ್ತಿ ದೇವಾಲಯದಲ್ಲಿ ಗಂಜಿಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಇದರ ಅಂಗವಾಗಿ ಕೆಂಪು ವಸ್ತ್ರಧಾರಿಗಳಾಗಿದ್ದ ನೂರಾರು ಮಂದಿ ಮಹಿಳೆಯರು ಮನೆಗಳಲ್ಲಿ ತಯಾರಿಸಿದ್ದ ಗಂಜಿಯನ್ನು ಹೊಸ ಮಡಿಕೆಯಲ್ಲಿ ತುಂಬಿಕೊಂಡು, ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಓಂಶಕ್ತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಯಲ್ಲಿ ಬೇವಿನ ಸೊಪ್ಪನ್ನು ಹಿಡಿದುಕೊಂಡು ಓಂ ಶಕ್ತಿ..ಪರಾಶಕ್ತಿ...ಓಂ ಶಕ್ತಿ..ಪರಾಶಕ್ತಿ.. ಓಂ..ಓಂ..ಶಕ್ತಿಯೇ ಆದಿಪರಾಶಕ್ತಿಯೇ..ಎನ್ನುವ ಘೋಷಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಪೂಜೆಗೆ ಮೆರುಗು ತಂದರು.
ದೇವಾಲಯದ ಆವರಣದಲ್ಲಿ ವಿಶೇಷ ನೃತ್ಯದ ಮೂಲಕ ದೇವಿಗೆ ಪೂಜೆ ಸಲ್ಲಿಸಿದರು. ಓಂ ಶಕ್ತಿ ಮಾಲೆ ಧರಿಸಿದ್ದ ಮಕ್ಕಳೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.