ತುಕ್ಕು ಹಿಡಿದ ಸ್ಥಿತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ
ತ್ಯಾಜ್ಯ ವಿಲೇವಾರಿ ಘಕಟದ ಪಕ್ಕದಲ್ಲಿಯೇ ತ್ಯಾಜ್ಯಕ್ಕೆ ಬೆಂಕಿ
ತ್ಯಾಜ್ಯ ವಿಲೇವಾರಿ ಘಟಕಗಳಿದ್ದರೂ ಎಲ್ಲೆಂದರಲ್ಲಿ ಕಸದ ರಾಶಿ

ಗ್ರಾಮೀಣ ಭಾಗದ ಜನರಿಗೆ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ಕಲಿಸಬೇಕಿದೆ. ವೈಜ್ಞಾನಿಕವಾಗಿ ಸಂಗ್ರಹಿಸಿ ಸ್ವಚ್ಛತೆ ಕಾಪಾಡುವ ಸರ್ಕಾರದ ಉದ್ದೇಶ ಈಡೇರಿಸುವಂತಾಗಬೇಕು.
ಸುರೇಶ್ ಉಪ ನಿರ್ದೇಶಕ ಎಂಜಿಎನ್‌ಆರ್‌ಇಜಿಎ
ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸದ್ಬಳಕೆಗೆ ಸಾರ್ವಜನಿಕರಲ್ಲಿ ಅರಿವು ಉಂಟಾಗಬೇಕು. ಅದಕ್ಕಾಗಿ ಗ್ರಾ.ಪಂ ನಿಂದ ಸಿದ್ಧತೆ ನಡೆದಿದೆ. ಕಸ ವಿಲೇವಾರಿಗಾಗಿ ನೇಮಿಸಿರುವ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಕಸ ನೀಡಲು ಸಾರ್ವಜನಿಕರು ಮುಂದೆ ಬರಬೇಕಿದೆ.
ಕುರುಬರಹಳ್ಳಿ ವೆಂಕಟೇಶ್ ಕುಂಬಳಹಳ್ಳಿ ಗ್ರಾ.ಪಂ ಉಪಾಧ್ಯಕ್ಷ
ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ವಿಲೇವಾರಿಗೆ ಘಟಕಗಳನ್ನು ಮಾಡಿದ್ದರೂ ಕೆಲೆವೆಡೆ ಗ್ರಾಮಸ್ಥರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಲವೆಡೆ ಗ್ರಾ.ಪಂ. ಅಧಿಕಾರಿಗಳು ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ.
ಸತೀಶ್ ನಂದಗುಡಿ