ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವಗಳಿಗೆ ಅನುಮತಿ ನೀಡಿ

ಧ್ವನಿವರ್ಧಕ, ದೀಪಾಲಂಕಾರ ಮಾಲೀಕರ ಸಂಘದಿಂದ ಪ್ರತಿಭಟನೆ
Last Updated 9 ಜನವರಿ 2021, 4:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೋವಿಡ್ ಸಂದರ್ಭದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಹಾಗೂ ವಾದ್ಯಗೋಷ್ಟಿ ಕಲಾವಿದರು ತೀವ್ರ ಸಂಕಷ್ಟಕ್ಕೀಡಾಗಿದ್ದರೂ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಅಖಿಲ ಕರ್ನಾಟಕ ವಾದ್ಯಗೋಷ್ಟಿ ಕಲಾವಿದರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್.ಶಂಕರ್ ಒತ್ತಾಯಿಸಿದರು.

ನಗರದ ಕಾವೇರಿ ಭವನದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಇಎಸ್‍ಐ ಸೌಲಭ್ಯ ನೀಡುವುದು ಹಾಗೂ ವಸತಿ ಯೋಜನೆಗಳಲ್ಲಿ ವಸತಿ ಕಲ್ಪಿಸುವುದು ಸೇರಿದಂತೆ ಸರ್ಕಾರ ಸೌಲಭ್ಯ ನೀಡಬೇಕಿದೆ ಎಂದರು.

ಚೀನಾ ಸೌಂಡ್ ಸಿಸ್ಟಮ್ ಪ್ರಭಾವದಿಂದಾಗಿ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಕೆಲಸ ಕಡಿಮೆ ಆಗುತ್ತಿದ್ದು, ಇದಕ್ಕೆ ಆದ್ಯತೆ ನೀಡಬಾರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರನ್ನು ಯಾವುದೇ ಸೌಲಭ್ಯ ನೀಡಲು ಪರಿಗಣಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಸಂಕಷ್ಟ ಬಗೆಹರಿಸಿಕೊಳ್ಳಬೇಕಿದೆ. ಸಂಘಕ್ಕೆ ಸದಸ್ಯರಾಗುವ ಮೂಲಕ ರಾಜ್ಯ ಸಂಘದಿಂದ ನೀಡಲಾಗುವ ₹2 ಲಕ್ಷದವರೆಗಿನ ಅಪಘಾತ ವಿಮೆ, ವೈದ್ಯಕೀಯ ವೆಚ್ಚದ ನೆರವು ಪಡೆದುಕೊಳ್ಳಬಹುದಾಗಿದೆ. ಶೇ1ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಧ್ವನಿವರ್ಧಕ ಮತ್ತು ದೀಪಾಲಂಕಾರ ವೃತ್ತಿಪರರು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆ ಮೂಲಕ ಸರ್ಕಾರಕ್ಕೆ ಸಮಸ್ಯೆ ಮನವರಿಕೆ ಮಾಡಿಕೊಡುವಲ್ಲಿ ಸಂಘ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಹಿರಿಯ ವೃತ್ತಿಪರರನ್ನು ಸನ್ಮಾನಿಸಲಾಯಿತು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ಹಿರಿಯ ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಅಂಜನಾದ್ರಿ ಟ್ರಸ್ಟ್ ನಿರ್ದೇಶಕ ಧೀರಜ್ ಮುನಿರಾಜ್, ಕೃಷ್ಣ ಸೌಂಡ್ಸ್‍ನ ಮಂಜುನಾಥ್, ಸಂಘದ ಅಧ್ಯಕ್ಷ ಆರ್.ರಘುಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಇದ್ದರು.

ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಯಾಗಿ ತ.ನ.ಪ್ರಭುದೇವ (ಗೌರವಾಧ್ಯಕ್ಷ), ಆರ್.ರಘುಕುಮಾರ್ (ಅಧ್ಯಕ್ಷ), ರಾಮಚಂದ್ರ(ಉಪಾಧ್ಯಕ್ಷ), ಸಿ.ಮುನಿರಾಜು (ಕಾರ್ಯಾಧ್ಯಕ್ಷ), ಎಸ್.ಶಶಿಕುಮಾರ್ (ಪ್ರಧಾನ ಕಾರ್ಯದರ್ಶಿ), ಜಿ.ಎನ್.ಆನಂದ್ (ಸಹಕಾರ್ಯದರ್ಶಿ), ಆರ್.ರಘು (ಖಜಾಂಚಿ), ಎಸ್.ಎನ್.ರಾಜು(ಗೌರವ ಸಲಹೆಗಾರ), ಜೆ.ರಾಜಣ್ಣ(ಸಂಘಟನಾ ಕಾರ್ಯದರ್ಶಿ), ಸುನೀಲ್(ಸಂಚಾಲಕ) ಸುರೇಶ್(ಸಹ ಸಂಚಾಲಕ),ನಿರ್ದೇಶಕರಾಗಿ ಎಸ್.ಹರ್ಷ, ವಿ.ರೋಹಿತ್, ಝಬಿಉಲ್ಲಾ, ಕೃಷ್ಣ, ಸಿ.ರಂಗನಾಥ್, ಟಿ.ರಾಮ್‍ನಾಯಕ್, ಎ.ಎಸ್,ಮಂಜುನಾಥ್. ಎಂ.ಎನ್.ಮುನಿರಾಜು, ಮುತ್ತಹನುಮಯ್ಯ, ಎಚ್‌.ನಾಗರಾಜು, ವರದರಾಜು, ಬಿ.ಕೆ.ರಾಮಕೃಷ್ಣ,ಸಿದ್ದಗಂಗಯ್ಯ,ಚಂದ್ರಹಾಸ,ವೀರಚಿಕ್ಕಯ್ಯ,ಮುನಿಯಣ್ಣ,ಸಿದ್ದಪ್ಪ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT