ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಫ್ಲಾಸ್ಕ್‌ನಲ್ಲಿ ಅಡಗಿಸಿಟ್ಟ ₹7.52 ಲಕ್ಷ ಮೌಲ್ಯದ ಚಿನ್ನದ ಪುಡಿ ವಶ

Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ದೇವನಹಳ್ಳಿ: ಸೌದಿ ಅರೇಬಿಯಾದ ಜೆಡ್ಡಾದಿಂದ ಜನವರಿ 28ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕ ಕುಡಿಯುವ ನೀರಿನ ಫ್ಲಾಸ್ಕ್‌ಗೆ ಲೇಪನ ಮಾಡಿಕೊಂಡು ತಂದಿದ್ದ ಚಿನ್ನದ ಪುಡಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಫ್ಲಾಸ್ಕ್‌ ಒಳಭಾಗದ ಮೇಲ್ಮೈಗೆ ಇತರ ವಸ್ತುಗಳ ಮಿಶ್ರಣದೊಂದಿಗೆ ಚಿನ್ನದ ಪುಡಿಯನ್ನು ಬೆರಸಿ ಲೇಪನ ಮಾಡಲಾಗಿತ್ತು.

₹7.52 ಲಕ್ಷ ಮೌಲ್ಯದ 122 ಗ್ರಾಂ ಚಿನ್ನದ ಪುಡಿಯನ್ನು ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿನ್ನದ ಪುಡಿ
ಚಿನ್ನದ ಪುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT