ಹೊಸಕೋಟೆ: ಪ್ರಸಕ್ತ ಶೈಕ್ಷಣಿಕ ಸಾಲಿನ ಪದವಿ ತರಗತಿಗಳು ಆರಂಭವಾಗಿ ಒಂದೂವರೆ ತಿಂಗಳಾದರೂ ಅತಿಥಿ ಉಪನ್ಯಾಸಕರಿಲ್ಲದೆ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ.

ಕಾಲೇಜು ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿಗೆ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದ ಕಾರಣ ಉಪನ್ಯಾಸಕರ ಕೊರತೆ ಕಾಡುತ್ತಿದೆ.

ಆಗಸ್ಟ್ 2 ರಿಂದ ಪ್ರತಿದಿನ ಒಂದು ಇಲ್ಲವೇ ಎರಡು ತರಗತಿ ಮಾತ್ರ ನಡೆಯುತ್ತವೆ. ತಾಲ್ಲೂಕಿನ ಗ್ರಾಮಾಂತರ ಭಾಗಗಳಿಂದ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸಕೋಟೆ ಮತ್ತು ಸೂಲಿಬೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.

ಪ್ರತಿನಿತ್ಯ ಕಾಲೇಜಿಗೆ ಬರುತ್ತೇವೆ. ಆದರೆ, ಉಪನ್ಯಾಸಕರಿಲ್ಲದೆ ಸರಿಯಾಗಿ ತರಗತಿ ನಡೆಯುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು. ದೂರದ ಮಾಸ್ತಿ, ಮಾಲೂರು, ನಂದಗುಡಿ ಭಾಗಗಳಿಂದ ಬರುವ ನಮಗೆ ತರಗತಿಗಳೇ ನಡೆಯುತ್ತಿಲ್ಲ. ಸುಮ್ಮನೇ ಕಾಲೇಜಿಗೆ ಏಕೆ ಬರಬೇಕು ಎನ್ನುವಂತಾಗಿದೆ. ಗುಣಮಟ್ಟದ ಕಲಿಕೆ ಹೇಗೆ ಸಾಧ್ಯ ಎನ್ನುತ್ತಾರೆ ತೃತೀಯ ಬಿಕಾಂ ವಿದ್ಯಾರ್ಥಿನಿ ಸಾಯಿ ರಂಜಿತ.

ಉಪನ್ಯಾಸಕರಿಲ್ಲದೆ ಪ್ರಾಯೋಗಿಕ ವಿಷಯಗಳನ್ನು ವಿದ್ಯಾರ್ಥಿಗಳು ಹೇಗೆ ಕಲಿಯಬೇಕು ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ.

ಕಾಲೇಜು ಶಿಕ್ಷಣ ಇಲಾಖೆ ಪ್ರತಿ ವರ್ಷ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತದೆ. ವಿಪರ್ಯಾಸ ಎಂದರೆ ರಜೆ ಇದ್ದಾಗ ಅತಿಥಿ ಉಪನ್ಯಾಸಕರು ಕೆಲಸದಲ್ಲಿ ಇರುತ್ತಾರೆ. ಕಾಲೇಜು ಆರಂಭವಾದಾಗ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರತಿವರ್ಷದ ಸಮಸ್ಯೆ. ಇದಕ್ಕೆ ಇನ್ನೂ ಪರಿಹಾರ ಮಾತ್ರ ದೊರೆತಿಲ್ಲ.

ಮುಗಿಯದ ‘ಅತಿಥಿ’ಗಳ ಗೊಂದಲ!

2022-23ನೇ ಸಾಲಿನಿಂದಲೂ ಪ್ರತಿವರ್ಷ ಅತಿಥಿ ಉಪನ್ಯಾಸಕರ ಸಮಸ್ಯೆ ಜೀವಂತವಾಗಿಯೇ ಉಳಿದು ಕೊಂಡಿದೆ. ಸರ್ಕಾರ ಅಥವಾ ಕಾಲೇಜು ಶಿಕ್ಷಣ ಇಲಾಖೆಗೆ ಅತಿಥಿ ಉಪನ್ಯಾಸಕರ ನೇಮಕವನ್ನು ಗಂಭಿರವಾಗಿ ಪರಿಗಣಿಸುತ್ತಿಲ್ಲ.

2018ರ ಯುಜಿಸಿ ಮಾನದಂಡದ ಅನ್ವಯ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಳ್ಳುವ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು ಕಡ್ಡಾಯವಾಗಿ ಎನ್ಇಟಿ ಇಲ್ಲವೇ ಎಸ್ಇಟಿ ಅಥವಾ ಪಿಎಚ್.ಡಿ ಪದವಿ ಪಡೆದಿರಬೇಕು.

ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಶೇ 50ರಷ್ಟು ಅತಿಥಿ ಉಪನ್ಯಾಸಕರು ಯುಜಿಸಿ ನಿಗದಿ ಪಡಿಸಿದ ಮಾನದಂಡದ ಪ್ರಕಾರ ಅರ್ಹತೆ ಹೊಂದಿಲ್ಲ. ಕಾಲೇಜು ಶಿಕ್ಷಣ ಇಲಾಖೆಯಲ್ಲೇ ಸದ್ಯ 430 ಕಾಲೇಜುಗಳಿಂದ 3,500 ಕಾಯಂ ಉಪನ್ಯಾಸಕರಿದ್ದಾರೆ. 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 11 ತಿಂಗಳ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅತಿಥಿ ಉಪನ್ಯಾಸಕರಿಲ್ಲದೆ ಕಾಲೇಜು, ತರಗತಿ ನಡೆಸುವುದು ಕಾಲೇಜು ಶಿಕ್ಷಣ ಇಲಾಖೆಗೆ ಕಷ್ಟವಾಗಿದೆ. ಆದರೆ, ಯುಜಿಸಿ ನಿಗದಿ ಪಡಿಸಿರುವ ಅರ್ಹತೆಯ ಮಾನದಂಡ ದೊಡ್ಡ ತಡೆಯಾಗಿ ಪರಿಣಮಿಸಿದೆ.

Quote - ಸರ್ಕಾರಕ್ಕೆ ಬದ್ದತೆ ಮಾನವೀಯತೆ ಇದ್ದರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಲಿ. ಇದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲೂ ನ್ಯಾಯವಾದ ಕ್ರಮ - ಡಾ. ರಾಮಲಿಂಗಪ್ಪ ಟಿ. ಬೇಗೂರು ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ

Quote - ಬಿದಿನಾಯಿಗಳಿಗೆ ಬಿರಿಯಾನಿ ಕೊಡುವ ಈ ಸರ್ಕಾರಗಳು ಅತಿಥಿ ಉಪನ್ಯಾಸಕರ ಬದುಕಿನ ಜೊತೆ ದಶಕಗಳಿಂದ ಚೆಲ್ಲಾಟವಾಡುತ್ತಿವೆ – ಶ್ರೀನಿವಾಸಾಚಾರ್ ಅತಿಥಿ ಉಪನ್ಯಾಸಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಕೋಟೆ

Quote - ಪ್ರತಿದಿನ ತರಗತಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕಾಲೇಜು ಪ್ರಾಂಶುಪಾಲರು ಅಥವಾ ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟರೆ ‘ಅತಿಥಿ ಉಪನ್ಯಾಸಕರ ವಿಷಯ ನ್ಯಾಯಾಲಯದಲ್ಲಿದೆ. ಇತ್ಯರ್ಥಗೊಂಡ ತಕ್ಷಣವೇ ಪರಿಹರಿಸುವುದಾಗಿ’ ಹೇಳುತ್ತಾರೆ. ಅಲ್ಲಿಯವರೆಗೆ ಹೇಗೆ ಎಂದರೆ ಅವರ ಬಳಿ ಉತ್ತರ ಇಲ್ಲ! - ದರ್ಶನ ಪತ್ರಿಕೋದ್ಯಮ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೂಲಿಬೆಲೆ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.