ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ನ್ಯೂಜಿಲೆಂಡ್ನ ಮೈಕೆಲ್ ವೀನಸ್ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ಯುಕಿ ಭಾಂಬ್ರಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.

ಆ ಮೂಲಕ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ತಮ್ಮ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಪುರುಷರ ಡಬಲ್ಸ್ ವಿಭಾಗದಲ್ಲಿ 14ನೇ ಶ್ರೇಯಾಂಕದ ಭಾರತ-ನ್ಯೂಜಿಲೆಂಡ್ ಜೋಡಿಯು 11ನೇ ಶ್ರೇಯಾಂಕಿತ ಕ್ರೊವೇಶಿಯಾದ ನಿಕೋಲಾ ಮೆಕ್ಟಿಕ್ ಹಾಗೂ ಅಮೆರಿಕದ ರಾಜೀವ್ ರಾಮ್ ವಿರುದ್ಧ 6-3, 6-7(8), 6-3ರ ಅಂತರದಲ್ಲಿ ಗೆಲುವು ಸಾಧಿಸಿತು.

ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಯುಕಿ-ಮೈಕಲ್ ಜೋಡಿಗೆ ಆರನೇ ಶ್ರೇಯಾಂಕದ ಇಂಗ್ಲೆಂಡ್ನ ಜೋ ಸಾಲಿಸ್ಬರಿ ಹಾಗೂ ನೀಲ್ ಸ್ಕುಪ್ಸ್ಕಿ ಸವಾಲು ಎದುರಾಗಲಿದೆ.

33 ವರ್ಷದ ಭಾಂಬ್ರಿ, ಪ್ರಸಕ್ತ ಸಾಲಿನಲ್ಲೇ ನಡೆದ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರು.

ಜೂನಿಯರ್ ವಿಭಾಗದಲ್ಲಿ ಮಾಜಿ ವಿಶ್ವ ನಂ.1 ಆಟಗಾರ ಆಗಿರುವ ಯುಕಿ, 2009ರ ಆಸ್ಟ್ರೇಲಿಯನ್ ಓಪನ್ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು.
.US Open: ಯೂಕಿ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯ ಕ್ವಾರ್ಟರ್ಗೆ ಲಗ್ಗೆ.US Open 2025: ಸೆಮಿಫೈನಲ್ನಲ್ಲಿ ಜೊಕೊವಿಕ್-ಅಲ್ಕರಾಜ್ ಸೆಣಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.