ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲೇರಹಳ್ಳಿ ಗ್ರಾಮ ದತ್ತು ಸ್ವೀಕಾರ: ಪ್ರತಿ ವಿದ್ಯಾರ್ಥಿಗೆ ಐದು ಕುಟುಂಬದ ಹೊಣೆ

Published 17 ಮಾರ್ಚ್ 2024, 7:16 IST
Last Updated 17 ಮಾರ್ಚ್ 2024, 7:16 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿಯಲ್ಲಿ ಶನಿವಾರ ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು.

ನೂರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 150 ಮಂದಿ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ, ಜನರಿಗೆ ಇರುವ ರೋಗಗಳ ಕುರಿತು ಸಮಾಲೋಚನೆ ನಡೆಸಿದರು.

ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜಿನ ಸಮುದಾಯ ಆರೋಗ್ಯ ಸಹಾಯಕ ಪ್ರಾಧ್ಯಾಪಕ ಡಾ.ದಿನೇಶ್ ರಾಜಾರಾಂ ಮಾತನಾಡಿ, ಆಸ್ಪತ್ರೆಯ ವತಿಯಿಂದ ಹೊಲೇರಹಳ್ಳಿ ಗ್ರಾಮವನ್ನು ಐದು ವರ್ಷಗಳ ಕಾಲ ದತ್ತು ಪಡೆಯಲಾಗುತ್ತದೆ. ಒಬ್ಬ ವಿದ್ಯಾರ್ಥಿಗೆ ಐದು ಮನೆಗಳ ಉಸ್ತುವಾರಿ ಕೊಡಲಾಗುತ್ತದೆ. ಐದು ಕುಟುಂಬಗಳಲ್ಲಿರುವ ಜನರ ಸಂಪೂರ್ಣ ಆರೋಗ್ಯ ಹೊಣೆಗಾರಿಕೆಯನ್ನು ಈ ವಿದ್ಯಾರ್ಥಿಗಳು ನೋಡಿಕೊಳ್ಳಲಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿ ಬಾರಿ ಭೇಟಿಯ ಸಮಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ. ಆರೋಗ್ಯ ಸುಧಾರಣೆಯ ಕುರಿತು ಅರಿವು ಮೂಡಿಸಲಿದ್ದೇವೆ. ಸ್ತ್ರೀರೋಗ, ಹೃದಯ ಸಂಬಂಧಿ ಕಾಯಿಲೆಗಳು, ಮದ್ಯಪಾನ, ಧೂಮಪಾನದಿಂದ ಆಗುವಂತಹ ದುಷ್ಪರಿಣಾಮ, ಕ್ಷಯರೋಗ ನಿಯಂತ್ರಣ, ಹಾಗೂ ಮಕ್ಕಳಿಗೆ ಬರುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತದೆ. ಇಂತಹ ರೋಗಿಗಳಿಗೆ ಶೇ 80 ರಷ್ಟು ರಿಯಾಯಿತಿ ಇರಲಿದೆ ಎಂದರು.

ಡಾ.ಸುಮನ್, ಡಾ.ಪವಿತ್ರ, ಡಾ.ರಂಜಿತ್, ಡಾ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT