ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ:‌ ಕಾಣೆಯಾದ ಯುವತಿ ಶವವಾಗಿ ಪತ್ತೆ

Published 28 ಆಗಸ್ಟ್ 2024, 14:32 IST
Last Updated 28 ಆಗಸ್ಟ್ 2024, 14:32 IST
ಅಕ್ಷರ ಗಾತ್ರ

ಹೊಸಕೋಟೆ:‌ ಕಾಣೆಯಾಗಿದ್ದ ಯುವತಿಯೊಬ್ಬರು ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ತರಬಹಳ್ಳಿಯ ಕೆರೆಯಲ್ಲಿ‌ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

ಅದೇ ಗ್ರಾಮದ ರೋಜ(30) ಮೃತ‌ ಯುವತಿ.

ಮಾನಸಿಕ ಅಸ್ವಸ್ಥೆಯಾಗಿದ್ದ ರೋಜ ಮಂಗಳವಾರ ಕಾಣೆಯಾಗಿದ್ದರು. ಈ ಸಂಬಂಧ ರೋಜ ಅವರ ಪೋಷಕರು ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಬುಧವಾರ ಬೆಳಗಿನ ಜಾವ ತರಬಹಳ್ಳಿ ಕೆರೆಯಲ್ಲಿ ಶವ ಪತ್ತೆಯಾಗಿದೆ. ಈಕೆಯ ಸಾವಿನ ಬಗ್ಗೆ ಸ್ಥಳೀಯರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಿರುಮಲಶೆಟ್ಟಿಹಳ್ಳಿ ಪೋಲೀಸರು ಪರಿಶೀಲನೆ ನಡೆಸಿದರು.

ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT