ಹೊಸಕೋಟೆ: (ಸಮೇತನಹಳ್ಳಿ) ಹೋಬಳಿಯ ತಿರುಮಶೆಟ್ಟಿಹಳ್ಳಿ ಸರ್ಕಲ್ನಲ್ಲಿ ಒಫಾರ್ಮ್ ಮತ್ತು ಮಾಲೂರು, ಹೊಸಕೋಟೆಗೆ ತೆರಳುವ ಸಾವಿರಾರು ವಾಹನಗಳು ಪ್ರತಿನಿತ್ಯ ಓಡಾಡುತ್ತವೆ. ಆದರೆ ಈ ಭಾಗದಲ್ಲಿ ಸರಿಯಾದ ಪಾದಚಾರಿ ಮಾರ್ಗವಿಲ್ಲದೆ ಜನರು ನಿತ್ಯ ಪ್ರಾಣಭಯದಲ್ಲೇ ಓಡಾಡುವಂತಹ ಸ್ಥಿತಿ ಉಂಟಾಗಿದೆ.

ಶಾಲಾ ಮಕ್ಕಳು, ಹಿರಿಯರು, ಮಹಿಳೆಯರು ರಸ್ತೆಯನ್ನು ದಾಟಲು ಸಮರ್ಪಕ ಕ್ರಾಸಿಂಗ್ ಲೈನ್ ಆಗಲಿ, ದ್ವಿಪಥದ ವ್ಯವಸ್ಥೆಯಾಗಲಿ ಇಲ್ಲವೇ ರಸ್ತೆ ವಿಭಜಕವಾಗಲಿ ಇಲ್ಲ. ಹೀಗಾಗಿ ಜನ ಸಂಕಷ್ಟಪಡುವಂತಾಗಿದೆ.

ತಿರುಮಶೆಟ್ಟಿಹಳ್ಳಿ ಬಳಿ ಹೆಸರಿಗೆ ಮಾತ್ರ ಒಫಾರ್ಮ್ (ವೈಟ್ ಫೀಲ್ಡ್), ಎಲೆಕ್ಟ್ರಾನಿಕ್ ಸಿಟಿ, ಮಾಲೂರು ಕೈಗಾರಿಕಾ ಪ್ರದೇಶ, ಚಿಕ್ಕತಿರುಪತಿ, ಹೊಸೂರು ಮತ್ತು ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 207 ಹಾದುಹೋಗುತ್ತದೆ. ಎಲ್ಲೆಂದರಲ್ಲಿ ಕಸ ಸುರಿದಿರುವುದು, ಪಾದಚಾರಿ ಮಾರ್ಗ ಇಲ್ಲದಿರುವುದು, ಮಳೆ ನೀರು ರಸ್ತೆಯಲ್ಲೇ ನಿಂತು ವಾಹನ ಸವಾರರು ಸಂಕಷ್ಟಪಡಬೇಕಿದೆ.

ತಿರುಮಶೆಟ್ಟಿಹಳ್ಳಿಯ ಸರ್ಕಲ್ ಬಳಿ ನಿತ್ಯ ವಾಹನ ದಟ್ಟಣೆ ಇರುತ್ತದೆ. ಇಲ್ಲಿ ರಸ್ತೆ ವಿಭಜಕ, ಪಾದಚಾರಿ ಮಾರ್ಗ ನಿರ್ಮಿಸಿದರೆ ಅನುಕೂಲ ಆಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

207ರ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಸರ್ಕಲ್ ಬಳಿ ಪಾದಾಚಾರಿಗಳಿಗೆ ಅನುಕೂಲವಾಗುವಂತೆ ಜಿಬ್ರಾ ಲೈನ್ ಆಗಲಿ, ಇಲ್ಲವೇ ಪಾದಚಾರಿ ಮಾರ್ಗ ಇಲ್ಲ. ಜನ ಹೇಗೆ ರಸ್ತೆ ದಾಟಬೇಕು ಎನ್ನುವುದಕ್ಕೆ ಸಂಬಂಧಪಟ್ಟ ಇಲಾಖೆಯೇ ಉತ್ತರ ನೀಡಬೇಕು ಎಂದು ತಿರುಮಶೆಟ್ಟಿಹಳ್ಳಿಯ ಮಾಜಿ ಸೈನಿಕ ಪಿಳ್ಳಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಿರುಮಶೆಟ್ಟಿಹಳ್ಳಿ ಸಮೀಪ ಬೃಹತ್ ಕಂಪನಿ ಮತ್ತು ವೇರ್ಹೌಸ್, ಗೊದಾಮು ಹಾಗೂ ಬಡಾವಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರತಿನಿತ್ಯ ಗೂಡ್ಸ್ ವಾಹನಗಳು, ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಹೆಚ್ಚು ಓಡಾಡುತ್ತವೆ. ರಸ್ತೆ ಮಧ್ಯೆ ವಿಭಜಕ, ಪಾದಚಾರಿ ಮಾರ್ಗ ಇಲ್ಲದಿರುವುದರಿಂದ ರಸ್ತೆ ದಾಟುವಲ್ಲಿ ನರಕ ದರ್ಶನವಾಗುತ್ತದೆ ಕಲಾವಿದರ ಸಂಘದ ನಿರ್ದೇಶಕ ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.