ಹೊರಗುತ್ತಿಗೆ ನೌಕರರ ಸಂಘದ ಸಭೆ: ನೇರ ವೇತನ ಜಾರಿಗೆ ಒತ್ತಾಯ

ದೊಡ್ಡಬಳ್ಳಾಪುರ: ರಾಜ್ಯದ ನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸುವಂತೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ ಆಗ್ರಹಿಸಿದ್ದಾರೆ.
ನಗರಸಭೆ ಕಾರ್ಯಾಲಯದ ಬಳಿಯ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾಹನ ಚಾಲಕರು ವಾಟರ್ ಮನ್, ತ್ಯಾಜ್ಯ ಸಹಾಯಕರು, ಡಾಟಾ ಆಪರೇಟರ್‌ಗಳು ಸೇರಿದಂತೆ ಹತ್ತು ಸಾವಿರಕ್ಕು ಹೆಚ್ಚು ಮಂದಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿದ್ದಾರೆ. ಯಾವುದೇ ಸೇವಾಭದ್ರತೆಯಿಲ್ಲದ ಈ ನೌಕರರನ್ನು ಮನಸೋ ಇಚ್ಛೆ ದುಡಿಸಿಕೊಂಡು ಕೆಲಸದಿಂದ ಕೈ ಬಿಡುವ ಪ್ರವೃತ್ತಿ ಇದೆ. ಬಹಳಷ್ಟು ಕಡೆ ಕನಿಷ್ಠ ವೇತನ ಭವಿಷ್ಯ ನಿಧಿ ಕ್ರಮವಾಗಿ ಪಾವತಿಯಾಗುತ್ತಿಲ್ಲ. ಸರಿಪಡಿಸಬೇಕಾದ ಕಾರ್ಮಿಕ ಇಲಾಖೆ ಕುರುಡಾಗಿದೆ ಎಂದು ದೂರಿದರು.
ರಾಜ್ಯ ಪೌರ ಕಾರ್ಮಿಕರ ಸಂಘದ ಯುವ ಅಧ್ಯಕ್ಷ ಚಲಪತಿ. ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ದೊಡ್ಡಬಳ್ಳಾಪುರ ಹೊರಗುತ್ತಿಗೆ ನೌಕರರ ಸಂಘದ ಚಂದ್ರಶೇಖರ್, ಸೋಮಶೇಖರ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.