ಹೊಸಕೋಟೆ: ತಾಲ್ಲೂಕು ವಕೀಲರ ಸಂಘದ ವತಿಯಿಂದ ಹೊಸಕೋಟೆ ನ್ಯಾಯಾಲಯದ ಆವರಣದಲ್ಲಿ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮತ್ತು ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಮೇಶ್ ಕೆ ಮಾತನಾಡಿ, ‘ಕರ್ನಾಟಕ ರಾಜ್ಯೋತ್ಸವ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು. ಶೋಕಿ ಮತ್ತು ಆಡಂಬರಕ್ಕಾಗಿ ಇತರ ಭಾಷೆ ಮಾತನಾಡುವುದನ್ನು ಬಿಟ್ಟು ಕನ್ನಡದಲ್ಲೇ ವ್ಯವಹರಿಸಬೇಕು’ ಎಂದು ಹೇಳಿದರು.

ವಕೀಲರು ಸಾಮಾಜಿಕ ನ್ಯಾಯ ಎತ್ತಿಹಿಡಿಯಲು, ಜನಸಾಮಾನ್ಯರ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಕ್ಷೇತ್ರದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು. ಜಗತ್ತಿನಲ್ಲಿ ಶಿಕ್ಷಕ, ಆರಕ್ಷಕ, ವೈದ್ಯ ಮತ್ತು ವಕೀಲ ವೃತ್ತಿಗಳು ಸಮಾಜದ ಸ್ವಾಸ್ತ್ಯ ಕಾಪಾಡಲು ಪ್ರಧಾನ ಪಾತ್ರವಹಿಸುತ್ತವೆ ಎಂದು ಪ್ರತಿಪಾದಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಜಿ ಮಾತನಾಡಿ, ವಕೀಲರು ನಮ್ಮ ಸಮಾಜದ ನ್ಯಾಯದ ಸ್ತಂಭಗಳು ಮತ್ತು ಹಕ್ಕುಗಳ ರಕ್ಷಕರು. ತಮ್ಮ ಇಡೀ ಜೀವನವನ್ನು ನ್ಯಾಯದ ಉಳಿವಿಗಾಗಿ ಮೀಸಲಿಡುತ್ತಾರೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಬಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಿಲ್ಪ ಎನ್. ಎಸ್, ನಿರ್ಮಲ ಕುಮಾರಿ ಎಂ, ಪ್ರಸನ್ನ ಕುಮಾರ್ ವಿ, ರವಿಕುಮಾರ್ ಕೆಎಂ, ಕೃಷ್ಣಪ್ಪ, ಹರೀಂದ್ರ, ವೆಂಕಟಸ್ವಾಮಿ, ಇಂದ್ರಾಣಿ, ಜಯಲಕ್ಷ್ಮಮ್ಮ, ಅವಿನಾಶ್ ಎಚ್, ನರಸಿಂಹಮೂರ್ತಿ, ಪದ್ಮ, ರವೀಂದ್ರ, ಸತ್ಯನಾರಾಯಣ ಎನ್ ಹಾಗೂ ವಕೀಲರು ಹಾಜರಿದ್ದರು.

ತಾಲ್ಲೂಕಿನ ನ್ಯಾಯಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ನಿತ್ಯದ ಕೆಲಸಗಳು ನಡೆಯುತ್ತಿವೆ. ಇನ್ನಾದರೂ ನ್ಯಾಯಾಲಯಕ್ಕೆ ನಗರದಲ್ಲಿ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಬೇಕು
ರಮೇಶ್. ಕೆ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.