ಹೊಸಕೋಟೆ: ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆ ಸಂಬಂಧ ನಗರದ ಅಂಬೇಡ್ಕರ್ ವಸತಿನಿಲಯದ ಸಭಾಂಗಣದಲ್ಲಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಿದವು.

ಜನವರಿ 1 ಬೆಳಗ್ಗೆ ಮೆರವಣಿಗೆ ಮತ್ತು ಭೀಮ ಕೊರೆಗಾಂವ್ ವಿಜಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಕಾಲೇಜು ರಸ್ತೆಯಿಂದ ಮೋರ್, ಕೆಇಬಿ ಸರ್ಕಲ್ ಮೂಲಕ ತಾಲ್ಲೂಕು ಕಚೇರಿ ಅವರಣದವರೆಗೆ ಕೊರೆಂಗಾವ್ ವಿಜಯಸ್ತಂಭ ಹಿಡಿದು ಮೇರೆವಣಿಗೆ,
ತಾಲ್ಲೂಕು ಕಚೇರಿ ಆವರಣದಲ್ಲಿ ತೆರೆದ ಸಭೆ ನಡೆಸಲು ಅಗತ್ಯ ಸಿದ್ಧತೆ ಆರಂಭಿಸಲು ಚರ್ಚೆ ನಡೆಯಿತು.

ದಲಿತರ ಹಕ್ಕಿಗಾಗಿ ಹೋರಾಟ ಮಾಡಿ ತ್ಯಾಗ ಬಲಿದಾನ ಗೈದವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯದಂತೆ ಮಾಡಿದ ಈ ದೇಶದ ಇತಿಹಾಸಕಾರರಿಗೆ ಏನೆಂದು ಹೇಳಬೇಕೆಂದು ತಿಳಿಯುತ್ತಿಲ್ಲ. ಇನ್ನಾದರೂ ನಮ್ಮ ಸಮುದಾಯದ ಇತಿಹಾಸವನ್ನು ನಮ್ಮವರಿಗೆ ಮಾತ್ರವಲ್ಲ ಎಲ್ಲ ವರ್ಗಗಳಿಗೂ ತಿಳಿಸುವ ಕೆಲಸ ಮಾಡಬೇಕೆಂದು ಕರ್ನಾಟಕ ಮಹಾಜನ ಸೇನೆಯ ಅಧ್ಯಕ್ಷ ಮಂಜುನಾಥ್ ಹೇಳಿದರು.

ಕಾರ್ಯಕ್ರಮಗಳನ್ನು ಆಯೋಜಿಸುವುವುದು ದೊಡ್ಡದಲ್ಲ. ನಮ್ಮವರ ಧ್ವನಿ ಗಟ್ಟಿಯಾಗಿಸಲು ನಾವೆಲ್ಲಾ ಒಗ್ಗೂಡಬೆಕಿದೆ. ಶಿಕ್ಷಣ, ಸಂಘಟನೆ, ಹೊರಾಟಗಳ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ದಲಿತ ಸಮುದಾಯವನ್ನು ಜಾಗೃತಗೊಳಿಸಬೇಕಿದೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಚಿನ್ನಸ್ವಾಮಿ ಹೇಳಿದರು.

ಬಾಲ್ಯದಲ್ಲಿ ಮೇಲ್ವರ್ಗದ ಮನೆ ಮುಂದೆ ಬೊಗಸೆಯಲ್ಲಿ ನೀರು ಕುಡಿದ ನೋವು ನಮಗೆ ಗೊತ್ತಿದೆ. ನಮ್ಮ ಹಕ್ಕು ಪಡೆಯಲು ಕೊರೆಗಾಂವ್ ಹೋರಾಟ ನಮಗೆ ಅದರ್ಶವಾಗಬೇಕು
ಮುನಿರಾಜು ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.