ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ವಿಪತ್ತು ರಕ್ಷಣಾ ಪರಿಹಾರಕ್ಕೊಂದು ಅಂತರ್ಜಾಲ ತಾಣ

Last Updated 23 ಆಗಸ್ಟ್ 2018, 14:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬೆಂಗಳೂರಿನ ‘ಭೂಮಿ ಉಸ್ತುವಾರಿ ಕೋಶ’ ನೆರೆ ಸಂತ್ರಸ್ತರಿಗಾಗಿ ‘ಕೊಡಗು ವಿಪತ್ತು ರಕ್ಷಣಾ ಪರಿಹಾರ’ಅಂತರ್ಜಾಲ ತಾಣ ಆರಂಭಿಸಿದೆ.

ನೆರೆ ಪೀಡಿತ ಪ್ರದೇಶದ ಜನರ ನೆರವಿಗಾಗಿಯೇ ಈ ತಾಣವನ್ನು ಆರಂಭಿಸಲಾಗಿದೆ. ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿರುವ ಹಾಗೂ ಪರಿಹಾರ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ ಪರಿಹಾರ, ರಕ್ಷಣೆ, ಸಾಮಗ್ರಿ, ಔಷಧಿ ಮಾಹಿತಿಗಳಿಗಾಗಿ ಇಲ್ಲಿ ನೋಂದಾಯಿಸಿಕೊಳ್ಳಬಹುದು. ಸಂತ್ರಸ್ತರು ಇರುವೆಡೆಗೆ ಅಗತ್ಯವಾದ ಸಹಾಯವನ್ನು ಸರ್ಕಾರ ಒದಗಿಸಲು ಈ ಅಂತರ್ಜಾಲ ಅಭಿವೃದ್ಧಿಗೊಳಿಸಲಾಗಿದೆ.

ಕಂದಾಯ ಇಲಾಖೆ ಭೂಮಿ ಉಸ್ತುವಾರಿ ಕೋಶ ವಿಭಾಗ ಆರಂಭಿಸಿರುವ ಈ ಅಂತರ್ಜಾಲ ತಾಣದಲ್ಲಿ ಈಗಾಗಲೇ ಸಾಕಷ್ಟು ಜನ ನೋಂದಾಯಿಸಿಕೊಂಡಿದ್ದಾರೆ. ಅಗತ್ಯ ಇರುವ ಕಡೆಗಳಿಗೆ ಸಾಮಗ್ರಿ ತಲುಪಿಸುವ ಕಾರ್ಯವೂ ಆರಂಭವಾಗಿದೆ.

ಭೂಮಿ ಉಸ್ತುವಾರಿ ಯೋಜನಾ ನಿರ್ದೇಶಕ ಸುರೇಶ್ ನಾಯರ್ ಮಾರ್ಗದರ್ಶನದಲ್ಲಿ ಶ್ರಮಿಸಿರುವ ತಂತ್ರಜ್ಞರಾದ ಕಿರಣ್, ರಾಜಶೇಖರ್, ಅಮಿರ್ ಖಾನ್, ರಾಹುಲ್ ಕುಮಾರ್ ತಂಡ ಇದಕ್ಕಾಗಿಯೇ ಶ್ರಮಿಸಿದೆ. ಇಲ್ಲಿ ಸರ್ಕಾರದ ವತಿಯಿಂದ ಕೊಡಗು ಜಿಲ್ಲೆಯ ಯಾವ ಸ್ಥಳದಲ್ಲಿ ಸಂತ್ರಸ್ತರ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರದ ಅಧಿಕಾರಿ ಹೆಸರು, ಮೊಬೈಲ್ ಸಂಖ್ಯೆ, ಕೇಂದ್ರದಲ್ಲಿ ಎಷ್ಟು ಜನ ಆಶ್ರಯ ಪಡೆದಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಈ ಜಾಲ ತಾಣದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಇದರಿಂದಾಗಿ ಸಂಗ್ರಹಿಸುವ ವಸ್ತುಗಳು ಯಾರದೋ ಕೈ ಸೇರುವ ಬದಲಿಗೆ ನೇರವಾಗಿ ಸಂತ್ರಸ್ತರ ಕೇಂದ್ರಗಳಿಗೆ ತಲುಪಲಿದೆ.

ವೆಬ್ ಜಾಲ ತಾಣಗಳ ಮಾಹಿತಿ ಕೊಂಡಿಗಳು:‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT