ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕಪ್ಪು ಬಣ್ಣಕ್ಕೆ ತಿರುಗಿದ ಕೆರೆ ನೀರು: ಆತಂಕ

Last Updated 30 ನವೆಂಬರ್ 2021, 6:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಎರಡು ದಶಕದ ನಂತರ ನಮ್ಮೂರಿನ ಕೆರೆ ಕೋಡಿ ಬಿದ್ದಿದ್ದಕ್ಕೆ ಸಂತಸ ಪಟ್ಟಿದ್ದೆವು. ಆದರೆ, ಈ ಸಂತಸ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಕೆರೆಗೆ ಹರಿದ ಪರಿಣಾಮ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ದೊಡ್ಡತುಮಕೂರು ಗ್ರಾಮದ ರೈತ ವಸಂತ್‌ಕುಮಾರ್‌ ದೂರಿದ್ದಾರೆ.

ಕೆರೆ ನೀರನ್ನುಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ನೀರಿನಲ್ಲಿ ಫ್ಲೋರೈಡ್‌ ಅಂಶ ಸೇರಿದಂತೆ ಹಲವಾರು ರೀತಿಯ ರಾಸಾಯನಿಕ ಅಂಶಗಳು ಇರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ನೀರು ಹರಿದು ಹೆಸರಘಟ್ಟ ಕೆರೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ. ನಮ್ಮೂರಿನ ಕೆರೆಯ ನೀರು ಕಲುಷಿತಗೊಳ್ಳಲು ನಗರಸಭೆ ವ್ಯಾಪ್ತಿಯಿಂದ ಬರುವ ಒಳಚರಂಡಿ ನೀರನ್ನು ಸೂಕ್ತ ರೀತಿಯಲ್ಲಿ ಶುದ್ಧೀಕರಿಸದೆ ಹೊರ ಬಿಡುತ್ತಿರುವುದೇ ಕಾರಣವಾಗಿದೆ. ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂಕ್ರಮವಹಿಸಿಲ್ಲ ಎಂದುದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT