ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ನ್ಯಾಯಬದ್ಧ ಜಮೀನು’

Last Updated 13 ಅಕ್ಟೋಬರ್ 2020, 4:35 IST
ಅಕ್ಷರ ಗಾತ್ರ

ದೇವನಹಳ್ಳಿ: ಹಲವು ವರ್ಷಗಳ ನಂತರ ನ್ಯಾಯಾಲಯದ ಸೂಕ್ತ ದಾಖಲಾತಿ ಆಧರಿಸಿ ಪೂಜನಹಳ್ಳಿ ರೈತರಿಗೆ ನ್ಯಾಯ ಬದ್ಧವಾಗಿ ಜಮೀನು ಸಿಕ್ಕಿದೆ ಎಂದು ರೈತ ವಿಶ್ವನಾಥ್ ಹೇಳಿದರು.

ಜಮೀನು ಗೊಂದಲ ಕುರಿತು
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೂಜನಹಳ್ಳಿ ಸ.ನಂ.21ರ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆಗೆ ಸರ್ಕಾರ ನೀಡಿದ್ದು ಕೇವಲ 5ಎಕರೆ ಅಷ್ಟೇ. ಅತಿಹೆಚ್ಚು ಜಮೀನು ಕನ್ನಮಂಗಲ ಸ.ನಂ.73 ಮತ್ತು 90ರಲ್ಲಿ ಇದೆ. ಕೆಲ ಮುಖಂಡರು ಹುನ್ನಾರದಿಂದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಕೆಂಪತಿಮ್ಮನಹಳ್ಳಿ ಜಮೀನು ಖರೀದಿ ಪ್ರಕರಣಕ್ಕೂ ರೊನಾಲ್ಡ್ ಕೊಲಾಸೋ ಅವರಿಗೂ ಯಾವುದೇ ಸಂಬಂಧವಿಲ್ಲ. ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಾ ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಅನಗತ್ಯ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಮಂಗಲ ಸ.ನಂ 90ರಲ್ಲಿ ಒತ್ತುವರಿಯಾಗಿರುವ 28 ಎಕರೆ ತೋಟಗಾರಿಕೆ ಇಲಾಖೆಗೆ ಸೇರಿದ್ದ ಜಾಗ ತೆರವುಗೊಳಿಸಲು ಒತ್ತಾಯಿಸಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT