ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ3ರ ಬಡ್ಡಿದರದಲ್ಲಿ ಸಾಲ

ಸಾಲ ಮರುಪಾವತಿಯಲ್ಲಿ ಪಿಕಾರ್ಡ್ ಬ್ಯಾಂಕ್ ಮುಂಚೂಣಿ
Last Updated 14 ಡಿಸೆಂಬರ್ 2020, 3:28 IST
ಅಕ್ಷರ ಗಾತ್ರ

ಆನೇಕಲ್ : ಸಾಲ ಮರುಪಾವತಿಯಲ್ಲಿ ಶೇ70.08ರಷ್ಟು ಸಾಧನೆ ಮಾಡಲಾಗಿದ್ದು ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನ ಪಡೆದಿದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರರೆಡ್ಡಿ ತಿಳಿಸಿದರು.

ಅವರು ಪಟ್ಟಣದ ಎಎಸ್‌ಬಿ ಸ್ವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ
ಮಾತನಾಡಿದರು.

ಬ್ಯಾಂಕ್‌ ವತಿಯಿಂದ ಈ ಸಾಲಿನಲ್ಲಿ ₹70.46ಲಕ್ಷ ಸಾಲ ನೀಡಲಾಗಿದೆ. ರೈತರ ಬ್ಯಾಂಕ್‌ ಇದಾಗಿದ್ದು ಈ ಮೂಲಕ ರೈತರ ಸಮಸ್ಯೆಗಳಿಗೆ ಬ್ಯಾಂಕ್‌ ಸ್ಪಂದಿಸುತ್ತಿದೆ. ಬೆಳೆಸಾಲ, ಇ-ಸ್ಟಾಂಪಿಂಗ್ ಸೇರಿದಂತೆ ಹಲವು ಸೌಲಭ್ಯ ರೈತರಿಗೆ ಕಲ್ಪಿಸಿಕೊಡಲಾಗಿದೆ. ರೈತರಿಗೆ ಶೇ3ರ ಬಡ್ಡಿದರದಲ್ಲಿ ₹10ಲಕ್ಷವರೆಗೆ ಸಾಲ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗಲಿದೆ ಎಂದರು.

ಬಮೂಲ್‌ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ, ರೈತರು ಮೀಟರ್‌ ಬಡ್ಡಿ ಸಾಲ ಪಡೆದು ಸಮಸ್ಯೆ
ಗಳ ಸುಳಿಗೆ ಸಿಲುಕಿಕೊಳ್ಳುತ್ತಾರೆ. ಆದರೆ, ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಲ್ಲಿ ಕಡಿಮೆ ಬಡ್ಡಿದರ ನೀಡಲಾಗುತ್ತದೆ. ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ಸಾಲ ಮರು
ಪಾವತಿಯಲ್ಲಿ ಪ್ರಾಮಾಣಿಕತೆ ತೋರಬೇಕು ಎಂದರು.

ಆನೇಕಲ್‌ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೈತ ಸ್ನೇಹಿಯಾಗಿದೆ. ಟ್ರ್ಯಾಕ್ಟರ್, ಸಮಗ್ರ ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ದ್ರಾಕ್ಷಿ ತೋಟ, ಹಂದಿ ಸಾಕಾಣಿಕೆ, ಗುಲಾಬಿ ಹಾಗೂ ಕುರಿ ಸಾಕಾಣಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾಲ ನೀಡಲಾಗುತ್ತಿದೆ. ಈ ಮೂಲಕ ತಾಲ್ಲೂಕಿನ ರೈತರು ಸ್ವಾವಲಂಬಿಗಳಾಗಲು ಬ್ಯಾಂಕ್‌ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು .

ಬ್ಯಾಂಕ್‌ನ ಉಪಾಧ್ಯಕ್ಷೆ ಪಿ.ಎನ್‌.ಭವಾನಿ, ಮುಖಂಡರಾದ ಎಂ.ಬಾಬು ರೆಡ್ಡಿ, ದೊಡ್ಡಹಾಗಡೆ ಸುಬ್ಬಣ್ಣ, ಪಾರ್ಥ ಸಾರಥಿ, ವೀರಪ್ಪ, ಜೆ.ನಾರಾಯಣಪ್ಪ, ಬ್ಯಾಂಕ್‌ನ ನಿರ್ದೇಶಕರಾದ ವಿ.ಆಂಜಿನಪ್ಪ, ಮಧು. ಎಸ್‌.ಮೂರ್ತಿ, ಪ್ರಭಾಕರ್, ಮುನಿ ರಾಜು, ಶ್ರೀನಿವಾಸರೆಡ್ಡಿ, ಗಂಗಪ್ಪ, ಮಂಗಳಗೌರಮ್ಮ, ಭದ್ರಪ್ಪ, ಲಕ್ಷ್ಮೀನಾರಾಯಣ್‌, ವ್ಯವಸ್ಥಾಪಕ ಸೋಮಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT