ಬುಧವಾರ, ಆಗಸ್ಟ್ 12, 2020
27 °C

ಸಾವಿನಲ್ಲಿಯೂ ಒಂದಾದ ತಾಯಿ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶದ ನಿವಾಸಿಗಳಾದ ಸರಸ್ವತಮ್ಮ(78) ಪುಟ್ಟರಾಜು (55)ತಾಯಿ ಮತ್ತು ಮಗ ಒಂದೇ ದಿನ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ನೇಕಾರರಾದ ಪುಟ್ಟರಾಜು ಅವರು ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರಸ್ವತಮ್ಮ ಅದೇ ವೇಳೆಗೆ ಮೃತಪಟ್ಟರು. ಸರಸ್ವತಮ್ಮ ಅವರಿಗೆ ಪತಿ, ಮೂವರು ಹೆಣ್ಣು, ಇಬ್ಬರು ಪುತ್ರರು ಇದ್ದಾರೆ. ಮೃತ ಪುಟ್ಟರಾಜು ಇವರ ಜೇಷ್ಟಪುತ್ರ. ಪುಟ್ಟರಾಜು ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ನೆರವೇರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು