ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸುತ್ತಿದ್ದ ಮುಖ್ಯಶಿಕ್ಷಕನ ಬಂಧನ

ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಘಟನೆ l ಆರೋಪಿ ಬಂಧಿಸಿದ ದಾಬಸ್‌ಪೇಟೆ ಪೊಲೀಸರು
Last Updated 25 ಜೂನ್ 2021, 21:28 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ವಿಶೇಷ ಮಕ್ಕಳ ವಸತಿ ಶಾಲೆಯೊಂದರ ವಿದ್ಯಾರ್ಥಿಯನ್ನು ಒತ್ತಾಯದಿಂದ ಸಲಿಂಗಕಾಮಕ್ಕೆ ಬಳಸಿಕೊಂಡಿರುವ ಆರೋಪದಡಿ, ಅದೇ ಶಾಲೆಯ ಮುಖ್ಯಶಿಕ್ಷಕ ಎಸ್‌. ರಂಗನಾಥ್‌ ಅವರನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

‘ವಸತಿ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿಯವರು ಜೂನ್ 16ರಂದು ದೂರು ನೀಡಿದ್ದಾರೆ. ಒತ್ತಾಯದ ಸಲಿಂಗಕಾಮ (ಐಪಿಸಿ 377) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿ ರಂಗ ನಾಥ್‌ ಅವರನ್ನು ಸೆರೆಹಿಡಿಯಲಾಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರಿನ ವಿವರ: ‘ವಿಶೇಷ ಮಕ್ಕಳಿಗಾಗಿ ಸಂಸ್ಥೆಯೊಂದರ ಅಡಿಯಲ್ಲಿ ವಸತಿ ಶಾಲೆ ಆರಂಭಿಸಲಾಗಿದೆ. 49 ಮಕ್ಕಳು ಶಾಲೆಯಲ್ಲಿದ್ದರು. ಕೋವಿಡ್‌ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡು, ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು’ ಎಂದು ದೂರಿನಲ್ಲಿ ಕಾರ್ಯದರ್ಶಿ ತಿಳಿಸಿದ್ದರು.

‘ಮಾಗಡಿ ತಾಲ್ಲೂಕಿನ ರಂಗನಾಥ್, 2009– 10ರಿಂದ ಶಾಲೆ ಮುಖ್ಯಶಿಕ್ಷಕನಾಗಿದ್ದರು. 2017ರಲ್ಲಿ ಮದುವೆ ಯಾಗಿದ್ದ ಅವರು, ಶಾಲೆ ಆವರಣದಲ್ಲಿರುವ ವಸತಿ ಸಮುಚ್ಚಯದ ಮನೆಯಲ್ಲಿ ನೆಲೆಸಿದ್ದರು. ಅವರಿಗೆ ಹೆಣ್ಣು ಮಗುವಿದೆ. ಕೆಲ ತಿಂಗಳ ಹಿಂದಷ್ಟೇ ಪತ್ನಿ ಮಗುವಿನ ಸಮೇತ ತವರು ಮನೆಗೆ ಹೋಗಿದ್ದರು.’

‘ಶಾಲೆಯ 21 ವರ್ಷದ ವಿಶೇಷ ವಿದ್ಯಾರ್ಥಿ ಜೊತೆ ಆರೋಪಿ ಹೆಚ್ಚು ಒಡನಾಟ ಬೆಳೆಸಿ ಸಲುಗೆಯಿಂದ ಮಾತನಾಡುತ್ತಿದ್ದರು. ವಿದ್ಯಾರ್ಥಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಆರೋಪಿ, ನೀಲಿ ಚಿತ್ರಗಳನ್ನು ತೋರಿಸುತ್ತಿದ್ದರು. ನಂತರ, ವಿದ್ಯಾರ್ಥಿಯ ಎಲ್ಲ ಬಟ್ಟೆ ಬಿಚ್ಚಿಸಿ ನಗ್ನಗೊಳಿಸುತ್ತಿದ್ದರು. ತಾನೂ ಬಟ್ಟೆ ಬಿಚ್ಚಿ ನಗ್ನವಾಗುತ್ತಿದ್ದರು. ನಂತರ, ವಿದ್ಯಾರ್ಥಿಯಿಂದ ತನ್ನ ದೇಹವನ್ನೆಲ್ಲ ನೆಕ್ಕಿಸಿಕೊಂಡು ಸಲಿಂಗ ಕಾಮಕ್ಕೆ ಬಳಸಿಕೊಳ್ಳುತ್ತಿದ್ದರು’ ಎಂಬ ಸಂಗತಿಯನ್ನು ದೂರಿನಲ್ಲಿ ಉಲ್ಲೇಖಿಸಿದ್ದರು.

‘ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ವಿದ್ಯಾರ್ಥಿ, ಇತ್ತೀಚೆಗೆ ಊರಿಗೆ ಹೋದಾಗ ತಾಯಿ ಬಳಿ ವಿಷಯ ತಿಳಿಸಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ, ಮಾನಸಿಕ ತಜ್ಞರೊಬ್ಬರನ್ನು ನಿಯೋಜಿಸಿ ಘಟನೆ ಬಗ್ಗೆ ಆಂತರಿಕ ತನಿಖೆ ನಡೆಸಿದೆ. ಆರೋಪಿ ರಂಗನಾಥ್ ಕೃತ್ಯ ಎಸಗಿರುವುದು ತನಿಖೆಯಿಂದ ಸಾಬೀತಾಗಿದೆ. ಇದರ ಆಧಾರದಲ್ಲಿ ದೂರು ನೀಡಲಾಗುತ್ತಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಕಾರ್ಯದರ್ಶಿ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT