ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗದ ಮಾಂಸದ ಮಾರಾಟ ಬೇಡಿಕೆ

ಹಕ್ಕಿಜ್ವರ ಭೀತಿ: ಮುಂಜಾಗ್ರತೆ ಕ್ರಮಕೈಗೊಂಡ ಕೋಳಿ ಸಾಕಾಣಿದಾರರು, ಸ್ವಚ್ಛತೆಗೆ ಆದ್ಯತೆ
Last Updated 8 ಜನವರಿ 2021, 5:23 IST
ಅಕ್ಷರ ಗಾತ್ರ

ದೇವನಹಳ್ಳಿ: ಹಕ್ಕಿಜ್ವರ ಭೀತಿಯಲ್ಲಿ ಕೋಳಿ ಸಾಕಾಣಿಕೆದಾರರು ಸ್ವಯಂ ಮುಂಜಾಗೃತಾ ಕ್ರಮವಾಗಿ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.

ಹಕ್ಕಿಜ್ವರದ ವದಂತಿ ಕಳೆದ ನಾಲ್ಕಾರು ದಿನಗಳಿಂದ ಹಬ್ಬಿದ್ದರೂ ಮಾರಾಟಗಾರರ ಮತ್ತು ಗ್ರಾಹಕರ ಉತ್ಸಾಹ ಕುಂದಿಲ್ಲ. ಪ್ರತಿ ಕೆ.ಜಿ.ಕೋಳಿ ಮಾಂಸ ₹170ರಿಂದ 180 ಇದೆ. ಸ್ಕಿನ್ ಔಟ್ ₹225 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಕೋಳಿ ಮಾಂಸದ ಬೆಲೆ ಏರುಪೇರು ಆಗಿಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ 611 ವಿವಿಧ ತಳಿಯ ಕೋಳಿ ಸಾಕಾಣಿಕೆ ಫಾರಂಗಳಿವೆ. ಕೆಲವು ಫಾರಂಗಳನ್ನು ಖಾಸಗಿ ಕಂಪನಿಗಳು ಕೂಲಿಕಾರರ ಮೂಲಕ ನಿರ್ವಹಣೆ ಮಾಡುತ್ತಿವೆ ಎಂದು ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಸ್ತುತದ ಪರಿಸ್ಥಿತಿಯಲ್ಲಿ ಸ್ಥಳೀಯ ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಮತ್ತು ಕೋಳಿಗಳಿಗೆ ಆರೋಗ್ಯದ ಸಮಸ್ಯೆ ಇಲ್ಲ. ಗುಣಮಟ್ಟದ ಕೋಳಿ ಸಾಕಾಣಿಕೆಗೆ ಒತ್ತು ನೀಡುತ್ತಿದ್ದಾರೆ. ಕೋಳಿ ಫಾರಂ ನಿರ್ವಹಣೆಗಾರರ ಮೊಬೈಲ್ ಸಂಖ್ಯೆ ವಾಟ್ಸ್ಆ್ಯಪ್‌ ಗ್ರೂಪ್‌ ಮಾಡಿಕೊಂಡು ಪ್ರತಿನಿತ್ಯ ಕೋಳಿಗಳ ದೈನಂದಿನ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ, ಪಶುವೈದ್ಯರ ಸಲಹೆ ಪಡೆಯಲಾಗುತ್ತಿದೆ ಎಂದು ಖಾಸಗಿ ಕೋಳಿ ಫಾರಂ ನಿರ್ವಹಣೆಗಾರ ಕಾಮೇನಹಳ್ಳಿ ಕೆ.ರಮೇಶ್ ಹೇಳಿದರು.

ಸುಜಯ್ ಕೋಳಿ ಫಾರಂ ನಿರ್ವಹಣೆಗಾರ ರಾಮಾಂಜಿನಪ್ಪ ಮಾತನಾಡಿ, ಒಂದು ಬ್ಯಾಚ್ ಗೆ 34 ಟನ್ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಹಕ್ಕಿ ಜ್ವರದ ಭೀತಿಯಿಂದ ದಿನದಲ್ಲಿ ಮೂರು ಬಾರಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಗ್ರಾಮಾಂತರ ಜಿಲ್ಲೆಯಲ್ಲಿರುವ ಕೋಳಿ ಫಾರಂಗಳಲ್ಲಿ 10ಕ್ಕಿಂತ ಹೆಚ್ಚು ಕೋಳಿಗಳು ಸಾವನ್ನಪ್ಪಿದರೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ತಾಲ್ಲೂಕಿನ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೆರೆ, ಕುಂಟೆ, ಕ್ವಾರಿಯಲ್ಲಿ ಶೇಖರಣೆಗೊಂಡಿರುವ ನೀರಿಗೆ ವಲಸೆ ಹಕ್ಕಿಗಳು ಬರುವ ಸಾಧ್ಯತೆ ಇರುವುದರಿಂದ ನಿಗಾ ಇಡುವಂತೆಯೂ ಸೂಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಕ್ಕಿ ಜ್ವರದ ಬಗ್ಗೆ ನಿಗಾ ಇಡಲು ಪಶು ಅಧಿಕಾರಿಗಳ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಪಶುವೈದ್ಯಕೀಯ ಇಲಾಖೆ ಜಿಲ್ಲಾ ಉಪನಿರ್ದೇಶಕ ನಾಗರಾಜ್ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT