ಆನೇಕಲ್: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶರಣ ನುಲಿಯ ಚಂದಯ್ಯ ಅವರ 918ನೇ ಜಯಂತಿ ಶನಿವಾರ ನಡೆಯಿತು. ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಕೊರಮರ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಣ್ಣ, ನುಲಿಯ ಚಂದಯ್ಯ ಅವರ ಸಂದೇಶ ಸಾರ್ವಕಾಲಿಕವಾಗಿವೆ. ಶ್ರೇಷ್ಠ ವಚನಕಾರರಾಗಿದ್ದ ಅವರು 12ನೇ ಶತಮಾನಹದಲ್ಲಿ ಬಸವಣ್ಣನವರ ಸಮಕಾಲೀನರಾಗಿ ಸಮಾಜದ ಬದಲಾವಣೆಗೆ ಶ್ರಮಿಸಿದ್ದಾರೆ. ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿದ್ದ ಅವರ ಆಶಯಗಳು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.

ಮನುಷ್ಯನಿಗೆ ಕಾಯಕ ನಿಷ್ಠೆ ಅತ್ಯಂತ ಮುಖ್ಯವಾದುದ್ದು. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕಾಯಕ ನಿರ್ವಹಿಸಬೇಕು. ಮನುಷ್ಯನ ಜೀವನದಲ್ಲಿ ಮಾನವೀಯತೆ ಅತ್ಯಂತ ಮುಖ್ಯವಾದುದ್ದು. ಬಲವಂತದ ಕಾಯಕದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂಬುದು ನುಲಿಯ ಚಂದಯ್ಯ ಅವರ ವಚನದ ಆಶಯವಾಗಿತ್ತು ಎಂದರು.

ಶರಣರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಸಮಾಜ ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಶರಣರ ವಚನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ನುಲಿಯ ಚಂದಯ್ಯ ಅವರ ಚಿಂತತನೆಗಳು ಸಮಾಜಕ್ಕೆ ಪ್ರೇರಣಯಾಗಿದೆ. ಅವರ ಹಾದಿಯಲ್ಲಿ ಸಾಗುವುದರಿಂದ ಕಾಯಕ ಶ್ರೇಷ್ಠತೆಯನ್ನು ಸಾಧಿಸಬಹುದು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಯಂತಿಗೆ ಮಾತ್ರ ಅವರ ತತ್ವ ಸಿದ್ಧಾಂತಗಳು ಸೀಮಿತವಾಗದೇ ಜೀವನದ ಭಾಗವಾಗಬೇಕು ಎಂದು ಮುಖಂಡ ಗೋವಿಂದರಾಜು ತಿಳಿಸಿದರು.

ವಕೀಲ ಗೋಪಾಲಕೃಷ್ಣ, ಅಖಿಲ ಕರ್ನಾಟಕ ಕೊರಮರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿ.ಎಸ್.ನವೀನ್, ಖಜಾಂಚಿ ಕಂದು ಕುಮಾರ್, ನಿರ್ದೇಶಕರಾದ ದೇವರಾಜು, ರಾಜಪ್ಪ, ಮಂಜಣ್ಣ, ದಾಸನಪುರ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.