ಶಿಡ್ಲಘಟ್ಟ: ನಗರದ ಸ್ವಾಸ್ಥ್ಯವನ್ನು ಅರಿಯಲು ಉದ್ಯಾನ ನೋಡಬೇಕು ಎನ್ನುವ ಮಾತಿದೆ. ಆದರೆ ನಗರದ ಉದ್ಯಾನಗಳು ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾಗಿವೆ.

ನಗರದ ಅಂದ ಹೆಚ್ಚಿಸಬೇಕಾದ ಉದ್ಯಾನಗಳು ನಿರ್ವಹಣೆ ಇವು ಉದ್ಯಾನವೋ ಕಸದ ತೊಟ್ಟಿಗಳೋ ಎನಿಸುವಷ್ಟರ ಮಟ್ಟಿಗೆ ಅಧ್ವಾನವಾಗಿವೆ. ವಾಯುವಿಹಾರಕ್ಕೆ, ಮಕ್ಕಳ ಆಟಗಳಿಗೆ ಸದ್ಭಳಕೆಯಾಗದೆ ನಿರ್ಜೀವವಾಗಿವೆ.

ಶಿಡ್ಲಘಟ್ಟದ ನಗರಸಭೆ ಮಾತ್ರ ಪ್ರತಿ ವರ್ಷ ಸುಮಾರು ₹50 ಲಕ್ಷವನ್ನು ತನ್ನ ವ್ಯಾಪ್ತಿಗೆ ಬರುವ ಎರಡು ಉದ್ಯಾನ ನಿರ್ವಹಣೆಯ ಖರ್ಚು ತೋರಿಸುತ್ತಿದೆ. ಆದರೆ ಯಾರ ನಿರ್ವಹಣೆ, ಯಾವುದರ ನಿರ್ವಹಣೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ನಗರದ ಹೊರವಲಯದಲ್ಲಿ ಚಿಂತಾಮಣಿ ರಸ್ತೆಯಲ್ಲಿರುವ ಮೊದಲ ಉದ್ಯಾನವನ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಈ ಉದ್ಯಾನವನ ನಿರ್ವಹಣೆ ಕೊರತೆಯಿಂದ ಯಾರೂ ಇಲ್ಲಿಗೆ ಹೋಗಲಾರದಂತೆ ರೋಗಪೀಡಿತ ಸ್ಥಿತಿಯಲ್ಲಿದೆ.

ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ 2002 ರಲ್ಲಿ ಆಗಿನ ಪುರಸಭೆಯ ಆಡಳಿತಾಧಿಕಾರಿ ಜಿ.ಎಸ್.ನಾಯಕ್ ಅವರ ಅಧಿಕಾರಾವಧಿಯಲ್ಲಿ ಆ ಪ್ರದೇಶದಲ್ಲಿ ಬೆಳೆದಿದ್ದ ಹಳೆಯ ಮರಗಳನ್ನೆಲ್ಲಾ ಸೇರಿಸಿಕೊಂಡು ಕಾಂಪೌಂಡ್ ನಿರ್ಮಿಸಿ ನಗರಸಭೆ ಉದ್ಯಾನವನವನ್ನಾಗಿ ರೂಪಿಸಲಾಗಿತ್ತು. ಇಲ್ಲಿನ ಅತ್ಯಂತ ಹಳೆಯದಾದ ಎತ್ತರದ ಮರಗಳಲ್ಲಿ ನೂರಾರು ಬಾವಲಿಗಳು, ಹಲವಾರು ವಿಧದ ಹಕ್ಕಿಗಳು ವಾಸಿಸುತ್ತವೆ.

ಪಕ್ಕದಲ್ಲಿಯೇ ನಗರಸಭೆಯ ನೀರು ಶೇಖರಣಾ ಹಾಗೂ ವಿತರಣಾ ಘಟಕ ಇರುವುದರಿಂದ ಉದ್ಯಾನವನದಲ್ಲಿ ನೀರಿನ ಕಾರಂಜಿ, ಗಣೇಶನ ಮೂರ್ತಿ, ಮಕ್ಕಳು ಆಡಲು ಉಯ್ಯಾಲೆ, ಜಾರೋಬಂಡೆ, ನಡೆದಾಡಲು ಪಥಗಳನ್ನೆಲ್ಲಾ ನಿರ್ಮಿಸಿದ್ದರು.

ನಗರದ ವಾಸಿಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು, ವಾಯುವಿಹಾರಿಗಳು ಪ್ರತಿನಿತ್ಯ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದರು. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಮಕ್ಕಳು ಉದ್ಯಾನವನದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು.

ಆದರೆ ಇದೀಗ ಉದ್ಯಾನದೊಳಗೆ ಎಲ್ಲೆಡೆ ಒಣ ಎಲೆಗಳು, ಕಸ ಹರಡಿ ನಿಂತಿವೆ. ನೀರು ಹರಿಯಲು ಇರುವ ಚರಂಡಿಯೊಳಗೆಲ್ಲಾ ಕಳೆ ಗಿಡಗಳು ಬೆಳೆದಿವೆ. ಕೂರಲು ಇರುವ ಬೆಂಚುಗಳೆಲ್ಲಾ ತುಕ್ಕು ಹಿಡಿದಿದೆ. ಎಲ್ಲೆಡೆ ಹಕ್ಕಿ ಮತ್ತು ಬಾವಲಿಗಳ ತ್ಯಾಜ್ಯ ಹರಡಿವೆ. ಬೇಲಿ ಗಿಡಗಳು ಹೇಗೆಂದರೆ ಹಾಗೆ ಬೆಳೆದಿದ್ದು, ಎಲ್ಲೆಡೆ ನೆಲದ ಮೇಲೆ ಎಲೆಗಳು ಹರಡಿರುವುದರಿಂದ, ಜನರು ಓಡಾದುವ ಸ್ಥಿತಿಯಲ್ಲಿ ಇಲ್ಲ.

ಕುಡುಕರ ನೆಚ್ಚಿನ ತಾಣ

ಉದ್ಯಾನ ನಿರ್ವಹಣೆ ಇಲ್ಲದೆ ಜನರು ಇತ್ತ ತಲೆ ಹಾಕುತ್ತಿಲ್ಲ. ಇದರಿಂದ ಮದ್ಯಪಾನ ಪ್ರಿಯರು ನಿತ್ಯ ಇಲ್ಲಿ ಪಾನಗೋಷ್ಠಿ ನಡೆಸುತ್ತಾರೆ. ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಪ್ಯಾಕೆಟ್ಗಳು ಹಾಗೂ ಪ್ಲಾಸ್ಟಿಕ್ ಬಾಟಲಿಗಳು ಉದ್ಯಾನವನ ಈಗ ಕುಡುಕರಿಗೆ ನೆಚ್ಚಿನ ತಾಣವಾಗಿದೆ ಎಂಬುದನ್ನು ಸೂಚಿಸುತ್ತದೆ. ಸಾರ್ವಜನಿಕರು ಸ್ವಚ್ಛತೆ ಇಲ್ಲದ ಕಾರಣದಿಂದ ಅಲ್ಲಿಗೆ ಹೋಗುವುದನ್ನು ಬಿಟ್ಟಾಗ ಈ ಸ್ಥಳ ಕುಡುಕರಿಗೆ ಅವಕಾಶವಿತ್ತಂತೆ ಆಗಿದೆ.

ಕಾಟಾಚಾರಕ್ಕೆ ಗಿಡ ನೆಡುವ ಜಾಗ

ನಗರದ ಗೌಡನಕೆರೆಯ ಅಂಚಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಗರಸಭೆ ನಿರ್ಮಿಸಿರುವ ಉದ್ಯಾನವನ ಆರಂಭದಿಂದಲೂ ಜನಸ್ನೇಹಿಯಾಗಿ ಉಳಿದಿಲ್ಲ. ಗಿಡ ನೆಡುವ ಕಾಟಾಚಾರದ ಕಾರ್ಯಕ್ರಮಕ್ಕೆ ಸ್ಥಳವಾಗಿದೆ. ಜನರು ಒಳಹೋಗಲು ಸಾಧ್ಯವಾಗದ ರೀತಿಯಲ್ಲಿದೆ. ಅದಕ್ಕಾಗಿ ಖರ್ಚು ಮಾಡಿರುವ ಹಣ ಹಾಗೂ ಪ್ರತಿವರ್ಷ ನಿರ್ವಹಣೆಗಾಗಿ ತೋರಿಸುತ್ತಿರುವ ಖರ್ಚಿನ ಲೆಕ್ಕದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.

ವಾಯು ವಿಹಾರಿಗಳಿಗೆ ತೊಂದರೆ

ನಗರದ ಹೊರವಲಯದ ಬಡಾವಣೆಗಳ ನಿವಾಸಿಗಳಿಗೆ ಹತ್ತಿರದಲ್ಲಿನ ಉದ್ಯಾನವನಕ್ಕೆ ಹೋಗಲು ಬಹಳ ಇಷ್ಟ. ಆದರೆ ಸೂಕ್ತ ನಿರ್ವಹಣೆ ಇಲ್ಲ. ಕುಡುಕರ ತಾಣವಾಗಿರುವ ಅಲ್ಲಿಗೆ ಹೇಗೆ ತಾನೆ ಹೆಂಗಸರು ಮತ್ತು ಮಕ್ಕಳು ಹೋಗುತ್ತಾರೆ. ಇರುವ ಮರಗಿಡಗಳನ್ನು ಕಾಪಾಡಿಕೊಂಡು ಸ್ವಚ್ಛತೆಯನ್ನು ಕಾಪಾಡಲು ಆಗದಿದ್ದರೆ ಹೇಗೆ. ವಾಯುವಿಹಾರಕ್ಕೆ ಹೋಗುವವರಿಗೆ ತೊಂದರೆಯಾಗಿದೆ ವಿ.ವೆಂಕಟರಮಣ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.