ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಖಾಸಗಿ ಬಸ್‌ಗಳಿಗೂ ಬೇಕಿದೆ ಶಕ್ತಿ, ಮಾಲೀಕರಿಗೆ ಬೇಡಿಕೆಗೆ ಸಿಗದ ಸ್ಪಂದನೆ

Published 26 ಫೆಬ್ರುವರಿ 2024, 6:00 IST
Last Updated 26 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಬಸ್‌ಗಳು ಶಕ್ತಿ ಕಳೆದುಕೊಂಡಿವೆ.

ಯೋಜನೆಯನ್ನು ಖಾಸಗಿ ಬಸ್‌ಗಳಿಗಗೂ ವಿಸ್ತರಿಸಬೇಕು ಎನ್ನುವ ಖಾಸಗಿ ಬಸ್ ಮಾಲೀಕರ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಗದೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಸ್‌ಗಳು  ತುಕ್ಕುಹಿಡಿಯುವಂತಾಗಿದೆ.

ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಬಸ್‌ ಹಾಗೂ ಬಿಎಂಟಿಸಿಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಕುಗ್ಗಿದೆ. ಇದರಿಂದ ಖಾಸಗಿ ಬಸ್‌ ಮಾಲೀಕರು ಮತ್ತು ಅದನ್ನು ನಂಬಿಕೊಂಡಿದ್ದ ಕಾರ್ಮಿಕರು, ಅವರ ಕುಟುಂಬ ಪರಿಸ್ಥಿತಿ ಹದಗೆಟ್ಟಿದೆ.

ಕೋವಿಡ್ ಸಂದರ್ಭದಲ್ಲಿ ಬಿದ್ದ ಹೊಡೆತದಿಂದ ಖಾಸಗಿ ಸಾರಿಗೆ ಕ್ಷೇತ್ರ ಇನ್ನೂ ಹೊರ ಬಂದಿರಲಿಲ್ಲ. ಮೂರು ವರ್ಷಗಳು ಕಳೆದರೂ, ಸರ್ಕಾರ ವಿಧಿಸಿರುವ ದುಬಾರಿ ತೆರಿಗೆಯ ಬಾಕಿ ಕಟ್ಟಲು ಮಾಲೀಕರು ಪರದಾಡುತ್ತಿದ್ದರು. ಈ ನಡುವೆ ಶಕ್ತಿ ಯೋಜನೆಯಿಂದ ವಹಿವಾಟು ಕುಸಿದಿದ್ದು, ಖಾಸಗಿ ಸಾರಿಗೆ ಕ್ಷೇತ್ರದ ಮಾಲೀಕರು ಮತ್ತು ಕಾರ್ಮಿಕರು ಸಮಸ್ಯೆ ಹೇಳ ತೀರದಂತಾಗಿದೆ.

ಬಸ್‌ ಸಂಚಾರ ಸ್ಥಗಿತಗೊಂಡಿರುವುದರಿಂದ ಬಸ್‌ಗಳು ತುಕ್ಕು ಹಿಡಿದು, ದುರಸ್ತಿಗೆ ಬಂದಿವೆ. ಆದರೆ ದುರಸ್ತಿಗೆ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಬಾಕಿ ತೆರಿಗೆ ಮನ್ನಾ ಮಾಡಿ, ತಿಂಗಳಿಗೊಮ್ಮೆ ಕಟ್ಟಬೇಕಾಗಿರುವ ತೆರಿಗೆಯ ಮೊತ್ತ ಕಡಿಮೆ ಮಾಡಿದರೆ ಚೇತರಿಸಿಕೊಳ್ಳಬಹುದು ಎನ್ನುತ್ತಾರೆ ಖಾಸಗಿ ಬಸ್ ಮಾಲೀಕ ಗೀತೇಶ್ ಹೇಳುತ್ತಾರೆ.

ಒಂದು ಖಾಸಗಿ ಬಸ್‌ಗೆ ಮೂರು ತಿಂಗಳಿಗೊಮ್ಮೆ ₹80 ಸಾವಿರ ತೆರಿಗೆ ಕಟ್ಟಬೇಕಾಗಿದೆ. ಕಳೆದ ಬಜೆಟ್ ನಲ್ಲಿ ರಸ್ತೆಸಾರಿಗೆ ತೆರಿಗೆಯನ್ನು ಶೇ 8 ರಷ್ಟು ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ. ಬಸ್‌ಗಳ ಟೈರ್‌, ಬಿಡಿಭಾಗಗಳು ಹಾಳಾಗುತ್ತಿವೆ ಎಂದು ತಿಳಿಸಿದರು.

ಒಂದೊಂದು ಬಸ್ಸಿನಲ್ಲಿ ಚಾಲಕ, ನಿರ್ವಾಹಕ, ಸ್ವಚ್ಛತೆಗಾರರು ಸೇರಿ ಕನಿಷ್ಠ 12 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅವರೆಲ್ಲರ ಜೀವನಕ್ಕೆ ಹೊಡೆತ ಬಿದ್ದಿದೆ. ಕೆಲವು ಚಾಲಕರು, ಟಾಟಾ, ಏಸ್ ಸೇರಿದಂತೆ ಸರಕು ಸಾಗಾಣಿಕೆ ವಾಹನ ತೆಗೆದುಕೊಂಡು ಬಾಡಿಗೆಗೆ ಹೋಗಿ ಜೀವನ ನಡೆಸುತ್ತಿದ್ದಾರೆ. ಉಳಿದ ಸಿಬ್ಬಂದಿಯಲ್ಲಿ ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ನಮ್ಮಲ್ಲೆ 10 ಬಸ್‌ಗಳಲ್ಲಿದ್ದವು ಈಗ ಮೂರು ಮಾತ್ರ ರಸ್ತೆಗಿಳಿಯುತ್ತಿವೆ. ಉಳಿದ ಏಳು ಬಸ್‌ ಸಂಚಾರ ಸ್ಥಗಿತಗೊಳಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ಮಾಲೀಕರು.

ಬೆಂಗಳೂರು-ಶಿಡ್ಲಘಟ್ಟ, ಮಾಲೂರು, ಹೊಸಕೋಟೆ, ಕೋಲಾರ, ಬಾಗಲೂರು ಮುಂತಾದ ಭಾಗಗಳಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಜೀವನಬಂಡಿ ದೂಡಲು ಪರದಾಡುತ್ತಿದ್ದಾರೆ.

ವಿಜಯಪುರ ಪಟ್ಟಣದಲ್ಲಿ ಕೋವಿಡ್ ಸಮಯದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸುಗಳನ್ನು ತೆರಿಗೆ ಭಾರದಿಂದ ಹೊರಗೆ ತೆಗೆಯಲು ಸಾಧ್ಯವಾಗದೆ ನಿಲ್ಲಿಸಿರುವುದು.
ವಿಜಯಪುರ ಪಟ್ಟಣದಲ್ಲಿ ಕೋವಿಡ್ ಸಮಯದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸುಗಳನ್ನು ತೆರಿಗೆ ಭಾರದಿಂದ ಹೊರಗೆ ತೆಗೆಯಲು ಸಾಧ್ಯವಾಗದೆ ನಿಲ್ಲಿಸಿರುವುದು.

ಖಾಸಗಿ ಬಸ್‌ಗೂ ವಿಸ್ತರಿಸಬೇಕು

ಖಾಸಗಿ ಬಸ್‌ ಮಾಲೀಕರು ಮತ್ತು ಕಾರ್ಮಿಕರು ಬಸವಳಿದು ಹೋಗಿದ್ದಾರೆ. ಖಾಸಗಿ ಬಸ್‌ ಮತ್ತು ಅದರ ಮಾಲೀಕರು ಕಾರ್ಮಿಕರಿಗೆ ಶಕ್ತಿ ತುಂಬಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಇದಕ್ಕಾಗಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಅಧ್ಯಕ್ಷ ನಟರಾಜ್ ಶರ್ಮಾ ಒತ್ತಾಯಿಸಿದರು. ‘ನಾವು ಮಹಿಳೆ ಪ್ರಯಾಣಿಕರಿಗೆ ಉಚಿತ ಬಸ್‌ ಸೇವೆ ನಿಡುತ್ತೇವೆ. ಸಾರಿಗೆ ಬಿಎಂಟಿಸಿಗೆ ಸರ್ಕಾರ ಹಣ ಮರುಪಾವತಿಸುವ ರೀತಿಯಲ್ಲೇ ನಮಗೂ ಪಾವತಿಸಲಿ. ಇಲ್ಲವೇ ನಾವು ಕಟ್ಟಬೇಕಾಗಿರುವ ತೆರಿಗೆಯಲ್ಲಾದರೂ ಕಡಿತ ಮಾಡಿಕೊಳ್ಳಲಿ’ ಎಂದು ತಿಳಿಸಿದರು. ಖಾಸಗಿ ಬಸ್‌ನಲ್ಲಿ ದುಡಿಯುತ್ತಿರುವವರಿಗೆ ಭದ್ರತೆ ಇಲ್ಲದಂತಾಗಿದೆ. ಕಾರ್ಮಿಕ ಇಲಾಖೆಯ ಮೂಲಕ ಅವರಿಗೂ ವಿಮೆ ಕೊಡಬೇಕು ಎಂದು ಒತ್ತಾಯಿಸಿದರು.

ಖಾಸಗಿ ಬಸ್ ಚಾಲನೆ ಮಾಡುತ್ತಿದ್ದಾಗ ಪ್ರತಿ ತಿಂಗಳು ₹15 ಸಾವಿರ ಸಂಬಳ ಬರುತ್ತಿತು. ದಿನಕ್ಕೆ ₹200 ರೂಪಾಯಿ ಬಾಟಾ ಸಿಗುತ್ತಿತ್ತು. ಮಕ್ಕಳನ್ನು ಪೋಷಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವು. ಬೇರೆಕಡೆ ಕೆಲಸ ಹೋಗುತ್ತಿದ್ದೇನೆ. ದಿನಕ್ಕೆ ₹300 ಸಂಪಾದನೆಯೂ ಕಷ್ಟವಾಗಿದೆ.
-ಶ್ರೀನಿವಾಸ್, ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT