ಶುಕ್ರವಾರ, ಜನವರಿ 24, 2020
16 °C

ಶರತ್ ಬಚ್ಚೇಗೌಡ ಪ್ರಮಾಣ ವಚನ: ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಭಾನುವಾರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ, ಹೊಸಕೋಟೆ ನಗರದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ಮಧ್ಯಾಹ್ನದ ನಂತರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅವರನ್ನು ಬೃಹತ್ ಗಾತ್ರದ ಸೇಬಿನ ಹಾರ, ಹೂವಿನ ಹಾರಗಳಿಂದ ಹಾಗೂ ಹೂ ಮಳೆಗೆರದು ಸ್ವಾಗತಿಸಿ ಅಭಿನಂದಿಸಿದರು.

ಶರತ್ ಬಚ್ಚೇಗೌಡ ಅವರ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪಟಾಕಿ ಸಿಡಿಸಿದರು. ಲಾಡು ವಿತರಣೆ ಮಾಡಿ ಮತದಾರರ ಜತೆಯಲ್ಲಿ ಸಂಭ್ರಮ ಆಚರಿಸಿದರು.

ಮೆರವಣೆಗೆಯಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಸೊಣ್ಣಪ್ಪ, ಸಿ.ಮಂಜುನಾಥ್, ಕುರುಬರ ಸಂಘದ ಮಾಜಿ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಬಿಡಿಸಿಸಿ ನಿರ್ದೇಶಕ ತಮ್ಮೇಗೌಡ, ಚಾಂದ್ ಪಾಷ, ಇಮ್ತಿಯಾಜ್, ಅರುಣ್ ಕುಮಾರ್, ಮಾದಿಗ ದಂಡೋರ ಅಧ್ಯಕ್ಷ ಸುಬ್ಬರಾಜು, ಕೇಂದ್ರ ಕಾರ್ಮಿಕ ಭವಿಷ್ಯ ನಿಧಿ ನಿರ್ದೇಶಕ ವಿಜಯ್ ಕುಮಾರ್, ಬಿ.ವಿ.ಬೈರೇಗೌಡ, ಯುವ ಮುಖಂಡ ಬಿ.ಜಿ.ನಾರಾಯಣಗೌಡ ಹಾಗೂ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು