ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಇಂದಿನಿಂದ ಶರನ್ನವರಾತ್ರಿ ಮಹೋತ್ಸವ

Last Updated 7 ಅಕ್ಟೋಬರ್ 2021, 7:07 IST
ಅಕ್ಷರ ಗಾತ್ರ

ದೇವನಹಳ್ಳಿ:ಪಟ್ಟಣದ ಪಾರ್ಕ್‌ ಶಾಲೆ ಪಕ್ಕದಲ್ಲಿರುವ ಸರ್ವಶಕ್ತ್ಯಾತ್ಮಕ ದೇವಾಲಯದಲ್ಲಿ ಅ. 7ರಿಂದ 15ರವರೆಗೆ ಶರನ್ನವರಾತ್ರಿ ಪೂಜಾ ಮಹೋತ್ಸವ ಜರುಗಲಿದೆ ಎಂದು ಚೌಡೇಶ್ವರಿ ದೇವಾಲಯದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಪಿ. ಗಂಗಾಧರ್ ತಿಳಿಸಿದರು.

ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರನ್ನವರಾತ್ರಿ ಅಂಗವಾಗಿ ಪ್ರತಿದಿನವೂ ಚೌಡೇಶ್ವರಿದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕೋವಿಡ್ ನಿಯಮದ ಅನುಸಾರವಾಗಿ ಭಕ್ತರು ದೇವಾಲಯಗಳಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.

ಚಿನ್ನ ಲೇಪಿತ ಶ್ರೀಚೌಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನು ದೇವಾಲಯದ ವಿಶೇಷ ಮಂಟಪದಲ್ಲಿ ಪಟ್ಟಕ್ಕೆ ಕೂರಿಸಲಾಗುವುದು. ಪ್ರತಿವರ್ಷವೂ ಶರನ್ನವರಾತ್ರಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಚೌಡೇಶ್ವರಿ ದೇವಿಗೆ ಅರಿಸಿನ, ಕುಂಕುಮ ಅಲಂಕಾರ, ಕೊಲ್ಲಾಪುರ ಲಕ್ಷ್ಮೀ ಅಲಂಕಾರ, ಗಂಧದ ಅಲಂಕಾರ, ನವಧಾನ್ಯಗಳ ಅಲಂಕಾರ, ವಿಶೇಷ ಹೂವಿನ ಅಲಂಕಾರ, ಸರಸ್ವತಿ ಅಲಂಕಾರ, ಮುತ್ತಿನ ಅಲಂಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅ. 8ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ‘ಅಕ್ಷಿ’ ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಅ. 10ರಂದು ದೊಡ್ಡಬಳ್ಳಾಪುರ ತಾಲ್ಲೂಕು ತಪಸೀಹಳ್ಳಿ ಪುಷ್ಪಾಂಡಜ ಗುರುಪೀಠದ ಟ್ರಸ್ಟಿನ ಪೀಠಾಧಿಪತಿ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ ಎಂದರು.

ಅ. 15ರಂದು ವಿಜಯದಶಮಿ ಅಂಗವಾಗಿ ಬೆಳಿಗ್ಗೆ 10.30ರಿಂದ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಕುಂಭಗಳಲ್ಲಿ ರಾಹುಕಾಲದ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ವಿಶೇಷ ಭಜನೆ, ಭಕ್ತಿಗೀತೆಗಳ ಗಾಯನ, ಮಹಾಪ್ರಸಾದ ವಿತರಣೆ ಇದೆ. ಅಶ್ವಥಪ್ಪ ಗುರೂಜಿ ಮತ್ತು ತಂಡ, ಪತಂಜಲಿ ಯೋಗಶಿಕ್ಷಣ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಸಹಯೋಗದಡಿ ಭಜನೆ ನಡೆಯಲಿದೆ. ಜಯಘೋಷಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಚೌಡೇಶ್ವರಿದೇವಿಯ ಉತ್ಸವಮೂರ್ತಿಯ ಮೆರವಣಿಗೆ, ಉಯ್ಯಾಲೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT