ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌| ನೋಂದಣಿ ಆದಾಯ ಖೋತಾ

ಲಾಕ್‌ಡೌನ್‌: ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳಿಲ್ಲ
ಅಕ್ಷರ ಗಾತ್ರ

ದೇವನಹಳ್ಳಿ: ಲಾಕ್‌ಡೌನ್‌ ಮಾಡಿರುವುದರಿಂದ ನೋಂದಣಿ ಇಲಾಖೆಯಿಂದ ಕೋಟ್ಯಂತರ ಶುಲ್ಕ ಸರ್ಕಾರದ ಬೊಕ್ಕಸಕ್ಕೆ ಖೋತಾ ಆಗಿದೆ ಎಂಬುದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲ್ಲೂಕಿನಲ್ಲಿರುವ ಉಪ ನೋಂದಣಿ ಇಲಾಖೆಯ ವಾರ್ಷಿಕ ವಿವಿಧ ನೊಂದಣಿ ಶುಲ್ಕ ₹ 60ರಿಂದ ₹ 70 ಕೋಟಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಸರ್ಕಾರ ಮಾರ್ಚ್‌ 24ರಿಂದ ಏ.14ರವರೆಗೆ ಲಾಕ್ ಡೌನ್ ಮಾಡಿದ ನಂತರ ಪ್ರಸ್ತುತ ಎರಡನೇ ಹಂತವಾಗಿ ಮೇ 3ರವರೆಗೆ ಲಾಕ್‌ಡೌನ್‌ ಮುಂದುವರಿಸಿ ನೋಂದಣಿ ಇಲಾಖೆಗೆ ಅವಕಾಶ ಮಾಡಿದೆ. ಮತ್ತೊಂದೆಡೆ ನೋಂದಣಿಗೆ ಮುಂದಾಗುವ ಸ್ವತ್ತಿನ ಮಾಲೀಕರು ನೋಂದಣಿಗೆ ಅಗತ್ಯವಿರುವ ದಾಖಲಾತಿ ಒದಗಿಸಿಕೊಳ್ಳಲು ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಗೈರಾಗಿದ್ದಾರೆ. ಇಲಾಖೆ ಕಚೇರಿಯು ಸಿಬ್ಬಂದಿಗೆ ಸೀಮಿತವಾಗಿದೆ’ ಎನ್ನುತ್ತಾರೆ ನೋಂದಣಿಯ ಮಧ್ಯವರ್ತಿಗಳು.
‘ಏ.24ರಿಂದ ನೋಂದಣಿಗೆ ಇಲಾಖೆ ಸಮ್ಮತಿಸಿ ಕಾರ್ಯಾರಂಭ ಮಾಡಿತ್ತು. ಮತ್ತೆ ಒಂದು ದಿನ ಕಚೇರಿ ಬಾಗಿಲು ತೆರೆದಿರಲಿಲ್ಲ. ಬುಧವಾರ ನೋಂದಣಿ ಇಲಾಖೆ ಕಚೇರಿ ಆರಂಭಿಸಿದೆ. ಲಾಕ್ ಡೌನ್‌ನಿಂದ ಸಾರಿಗೆ ವ್ಯವಸ್ಥೆ ಇಲ್ಲ. ನೋಂದಣಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಬರಬೇಕು. ಸ್ಟ್ಯಾಂಪ್‌ ಪೇಪರ್ ಬೇಕು. ಟೈಪಿಂಗ್ ಮಾಡಿಸಬೇಕು. ಸ್ವತ್ತಿನ ಮೌಲ್ಯಕ್ಕೆ ಅನುಗುಣವಾಗಿ ನೋಂದಣಿ ಶುಲ್ಕದ ಡಿ.ಡಿ ತೆಗೆಯಿಸಬೇಕು. ಇವುಗಳ ಸಿದ್ಧತೆ ಇಲ್ಲದೆ ನೋಂದಣಿ ಸಾಧ್ಯವಿಲ್ಲ. ಸರ್ಕಾರದ ಮಂತ್ರಿಗಳು ಎಲ್ಲೋ ಕುಳಿತು ಆದೇಶ ಮಾಡಿದರೆ ಹೇಗೆ? ಸಾಧಕ ಬಾಧಕದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಿತ್ತು‍’ ಎನ್ನುತ್ತಾರೆ ಸ್ಥಳೀಯರು.

ಲಾಕ್‌ಡೌನ್‌ ಇರುವುದರಿಂದ ಯಾರು ಪತ್ರಬರಗಾರರು ತಮ್ಮ ಕಚೇರಿಯನ್ನು ತೆರೆಯುವಂತಿಲ್ಲ. ಈ ರೀತಿಯಾದರೆ ನೋಂದಣಿಗೆ ಬರುವುದಾದರೆ ಹೇಗೆ ಎನ್ನುತ್ತಾರೆ ಅತ್ತಿಬೆಲೆ ನರಸಪ್ಪ.

ರಾಜ್ಯ ಕಂದಾಯ ಸಚಿವರು ಈಗಾಗಲೇ ಆದೇಶ ನೀಡಿ ಜೆರಾಕ್ಸ್ ಅಂಗಡಿ, ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳನ್ನು ಸೋಂಕು ಇಲ್ಲದ ತಾಲ್ಲೂಕುಗಳಲ್ಲಿ ಆರಂಭಿಸಬಹುದು ಎಂದು ಹೇಳಿ ಲಾಕ್ ಡೌನ್ ಸಡಿಲಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮಾಹಿತಿ ಬಗ್ಗೆ ತಿಳಿಸಿದರೂ ಪೊಲೀಸರು ಒಪ್ಪಿಲು ಸಿದ್ದರಿಲ್ಲ. ಅಂದ ಮೇಲೆ ನೋಂದಣಿ ಕಚೇರಿ ಆರಂಭಿಸಿದರೂ ಪ್ರಯೋಜನವೇನು ಎಂಬುದು ನರಸಪ್ಪರ ಮತ್ತೊಂದು ಪ್ರಶ್ನೆ.
ಲಾಕ್ ಡೌನ್ ಆಗಿರುವುದರಿಂದ ಆರ್.ಟಿ.ಸಿ.ಸಿಗುತ್ತಿಲ್ಲ. 11ಇ ಸ್ಕೇಚ್ ಅಗಬೇಕು, ಇ.ಸಿ.ದಾಖಲೆ ಆನ್‌ಲೈನ್‌‌ಗೆ ಮೊರೆ ಹೋಗಬೇಕು. ಆದು ಸಕಾಲದಲ್ಲಿ ಸಿಗುವುದಿಲ್ಲ. ಒಂದು ಎಕರೆ ಜಮೀನಿಗೆ ಜಂಟಿ ಇದ್ದರೆ 10 ರಿಂದ 15 ಕುಟುಂಬದ ಸದಸ್ಯರು ಬರಬೇಕು. ಅನೇಕ ತೊಡಕುಗಳಿವೆ. ಸಾರಿಗೆ ವ್ಯವಸ್ಥೆ ಸಡಿಲ ಮಾಡಿ ಪತ್ರ ಬರಹಗಾರರು ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಇಲಾಖೆ ಸಿಬ್ಬಂದಿ ಯಥಾಸ್ಥಿತಿ ಕಾರ್ಯನಿರ್ವಹಿಸಿದರೆ ಮಾತ್ರ ನೋಂದಣಿ ಸರಾಗವಾಗಲಿದೆ ಎನ್ನುತ್ತಾರೆ ಪತ್ರ ಬರಹಗಾರ ಜಿ.ವೆಂಕಟೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT